ಮಾದಕದ್ರವ್ಯ ಜಾಲ: ಸಿಟ್‌ನಿಂದ ತೆಲುಗು ನಟ ತರುಣ್ ವಿಚಾರಣೆ
Update: 2017-07-22 18:57 IST
ಹೈದರಾಬಾದ್,ಜು.22: ಜುಲೈ 2ರಂದು ಭೇದಿಸಲಾಗಿರುವ ಮಾದಕ ದ್ರವ್ಯ ಮಾರಾಟ ಜಾಲಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ತೆಲುಗು ನಟ ತರುಣ್ ಶನಿವಾರ ತೆಲಂಗಾಣ ಅಬಕಾರಿ ಇಲಾಖೆಯ ವಿಶೇಷ ತನಿಖಾ ತಂಡ(ಸಿಟ್)ದ ಎದುರು ಹಾಜರಾಗಿದ್ದರು.
ಸಿಟ್ ಎದುರು ವಿಚಾರಣೆಗೆ ಹಾಜರಾಗುವಂತೆ ನಟರು, ನಿರ್ದೇಶಕರು ಮತ್ತು ನಿರ್ಮಾಪಕರು ಸೇರಿದಂತೆ ತೆಲುಗು ಚಿತ್ರರಂಗದ 12 ಗಣ್ಯರಿಗೆ ಕಳೆದ ವಾರ ಮಾದಕ ದ್ರವ್ಯ ಕಾಯ್ದೆಯಡಿ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿತ್ತು.
ನಟ ಸುಬ್ಬರಾಜು ಅವರನ್ನು ಸಿಟ್ ಅಧಿಕಾರಿಗಳು ಶುಕ್ರವಾರ 10 ಗಂಟೆಗೂ ಅಧಿಕ ಸಮಯ ಪ್ರಶ್ನಿಸಿದ್ದರು.
ಸುಬ್ಬರಾಜು ವಿಚಾರಣೆಯಿಂದ ಕೆಲವು ಮಹತ್ವದ ಸುಳಿವುಗಳನ್ನು ತನಿಖಾಧಿಕಾರಿಗಳು ನಿರೀಕ್ಷಿಸಿದ್ದಾರೆ ಎಂದು ಅಬಕಾರಿ ಆಯುಕ್ತ ಆರ್.ವಿ.ಚಂದ್ರವದನ ಅವರು ಸುದ್ದಿಗಾರರಿಗೆ ತಿಳಿಸಿದರು.
ಸಿಟ್ ಈವರೆಗೆ ಸುಬ್ಬರಾಜುವಲ್ಲದೆ ಚಿತ್ರ ನಿರ್ದೇಶಕ ಪುರಿ ಜಗನ್ನಾಥ ಮತ್ತು ಸಿನೆಮಾಟೋಗ್ರಾಫರ್ ಶ್ಯಾಮ ಕೆ.ನಾಯ್ಡು ಅವರನ್ನೂ ವಿಚಾರಣೆಗೊಳಪಡಿಸಿದೆ.