ಟರ್ಕಿಯಲ್ಲಿ ಭೂಕಂಪನ: 358 ಮಂದಿಗೆ ಗಾಯ

Update: 2017-07-22 17:27 GMT

ಅಂಕಾರ,ಜು.22: ಟರ್ಕಿಯಲ್ಲಿ ಶನಿವಾರ ಮುಂಜಾನೆ ನಡೆದ ಭೂಕಂಪದಲ್ಲಿ ಕನಿಷ್ಠ 358 ಮಂದಿ ಗಾಯಗೊಂಡಿದ್ದು, ಅವರಲ್ಲಿ 25 ಮಂದಿಯ ಪರಿಸ್ಥಿತಿ ಚಿಂತಾಜನಕವಾಗಿರುವುದಾಗಿ ತಿಳಿದುಬಂದಿದೆ.

6.7 ರಿಕ್ಟರ್‌ಸ್ಕೇಲ್ ತೀವ್ರತೆಯ ಭೂಕಂಪನವುಂಟಾದ ಸಂದರ್ಭದಲ್ಲಿ ಭಯಭೀತರಾದ ಜನರು ಕಟ್ಟಡ ಹಾಗೂ ಅಪಾರ್ಟ್‌ಮೆಂಟ್‌ಗಳಿಂದ ಧಾವಿಸಿಬಂದಾಗ ಉಂಟಾದ ನೂಕುನುಗ್ಗಲಿನಿಂದಾಗಿ ಹಲವರು ಗಾಯಗೊಂಡಿದ್ದಾರೆಂದು ಮೂಲಗಳು ತಿಳಿಸಿವೆ. ಅಂಕಾರ ಸಮೀಪದ ಕಡಲಿನಲ್ಲೂ ಸಣ್ಣ ಗಾತ್ರದ ಸುನಾಮಿ ಅಲೆಗಳು ಕಾಣಿಸಿಕೊಂಡಿರುವುದಗಿ ಟರ್ಕಿಯ ಹವಾಮಾನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News