×
Ad

ಸೇನಾಧಿಕಾರಿಗಳಿಗೆ ಉಚಿತ ಪಡಿತರ ರದ್ದುಗೊಳಿಸಿದ ಕೇಂದ್ರ ಸರಕಾರ !

Update: 2017-07-25 20:38 IST

 ಕೋಲ್ಕತಾ, ಜು. 25: ಶಾಂತಿ ಪ್ರದೇಶಗಳಲ್ಲಿರುವ ಸೇನಾಧಿಕಾರಿಗಳಿಗೆ ಉಚಿತ ಪಡಿತರ ನೀಡುವುದನ್ನು ರದ್ದುಪಡಿಸಿರುವ ಕೇಂದ್ರದ ನಿರ್ದಾರ ಈಗ ಕಾನೂನು ಹೋರಾಟಕ್ಕೆ ಕಾರಣವಾಗಿದೆ. ಪಡಿತರ ರದ್ದುಪಡಿಸಿರುವ ನಿರ್ಧಾರವನ್ನು 60 ದಿನಗಳ ಒಳಗೆ ಹಿಂದೆ ತೆಗೆದುಕೊಳ್ಳುವಂತೆ ಕೋರಿ ಹಿರಿಯ ಸೇನಾಧಿಕಾರಿ ರಕ್ಷಣಾ ಕಾರ್ಯದರ್ಶಿ ಅವರ ಮೂಲಕ ಕೇಂದ್ರ ಸರಕಾರರಕ್ಕೆ ನೊಟೀಸು ರವಾನಿಸಿದ್ದಾರೆ.

60 ದಿನಗಳಲ್ಲಿ ಆದೇಶವನ್ನು ಹಿಂದೆ ತೆಗೆಯದೇ ಇದ್ದರೆ ನ್ಯಾಯಾಲಯದ ಮೆಟ್ಟಿಲೇರಲಾಗುವುದು ಎಂದು 12 ಕಾರ್ಪ್ಸ್‌ನ ಕೇಂದ್ರ ಕಚೇರಿಯ ಅಡ್ವೊಕೇಟ್ ಜನರಲ್ ಕರ್ನಲ್ ಮುಕುಲ್ ದೇವ್ ಎಚ್ಚರಿಸಿದ್ದಾರೆ.

 ನಾಗರಿಕ ಪ್ರಕ್ರಿಯೆ ಸಂಹಿತೆ ಕಲಮಿನ ಅಡಿ ತಾನು 1988ರಲ್ಲಿ ಸೇನೆಗೆ ಸೇರಿದ್ದೇನೆ. ಪ್ರಮಖ ದಿನಪತ್ರಿಕೆಯಲ್ಲಿ ಪ್ರಕಟವಾದ ಸಿಡಿಎಸ್‌ಇಗೆ ಸಂಬಂಧಿಸಿದ ಯುಪಿಎಸ್‌ಸಿಯ ಜಾಹಿರಾತು, ಅಧಿಸೂಚನೆ ಗಮನಿಸಿ ಅರ್ಜಿ ಸಲ್ಲಿಸಿ ಪರೀಕ್ಷೆಗೆ ಹಾಜರಾಗಿ ನೇಮಕನಾಗಿದ್ದೇನೆ ಎಂದು ಅವರು ನೊಟೀಸಿನಲ್ಲಿ ತಿಳಿಸಿದ್ದಾರೆ.

ಇದಲ್ಲದೆ ಸೇವೆಯ ಇತರ ನಿಯಮ ಹಾಗೂ ಷರತ್ತುಗಳ ಬಗ್ಗೆ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಹೇಳಿದೆ. ಇದರಲ್ಲಿ ಉಚಿತ ಪಡಿತರ ಪಡೆಯುವ ಅವಕಾಶ ಇದೆ. ಪಡಿತರ ಬದಲಿಗೆ ನಗದು ನೀಡುವುದನ್ನು ಇದರಲ್ಲಿ ಉಲ್ಲೇಖಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News