×
Ad

ಅಂಗನವಾಡಿಗಳನ್ನು ಶಾಲೆಯೊಂದಿಗೆ ವಿಲೀನಕ್ಕೆ ಕೇಂದ್ರ ನಿರ್ಧಾರ

Update: 2017-07-26 21:15 IST

ಹೊಸದಿಲ್ಲಿ, ಜು. 26: ರಾಜಸ್ತಾನ ಸರಕಾರ ಕೈಗೊಂಡ ಕ್ರಮದಂತೆ ದೇಶದಾದ್ಯಂತ ಇರುವ ಸಾವಿರಾರು ಅಂಗನವಾಡಿಗಳನ್ನು ಶಾಲೆಗಳೊಂದಿಗೆ ವೀಲೀನಗೊಳಿಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದೊಂದಿಗೆ ಮಾತುಕತೆ ನಡೆಸುತ್ತಿದೆ. ರಾಜಸ್ತಾನ ಸರಕಾರ ಅಂಗನವಾಡಿ ಹಾಗೂ ಸರಕಾರಿ ಶಾಲೆಗಳನ್ನು ವಿಲೀನಗೊಳಿಸಿದೆ. ಸಣ್ಣ ಪ್ರಾಯದಲ್ಲೇ ಮಕ್ಕಳಿಗೆ ಶಾಲೆ ವಾತಾವಾರಣ ಪರಿಚಯ ಮಾಡಿಕೊಡುವುದು ಇದರ ಉದ್ದೇಶ. ದೇಶಾದ್ಯಂತ ಇದನ್ನು ಅನುಷ್ಠಾನಗೊಳಿಸಲು ನಾವು ಮಾತುಕತೆಯಲ್ಲಿ ತೊಡಗಿದ್ದೇವೆ ಎಂದು ಮಾನವ ಸಂಪನ್ಮೂಲ ಸಚಿವಾಲಯದ ಕಚೇರಿ ತಿಳಿಸಿದೆ.ರಾಜಸ್ತಾನ ಸರಕಾರ ಕಳೆದ ಎರಡು ವರ್ಷಗಳಲ್ಲಿ 11 ಸಾವಿರ ಅಂಗನವಾಡಿಗಳನ್ನು ಶಾಲೆಗಳೊಂದಿಗೆ ವಿಲೀನಗೊಳಿಸಿದೆ. ಈ ಬಗ್ಗೆ ಮಾತನಾಡಿದ ರಾಜಸ್ತಾನದ ಶಿಕ್ಷಣ ಸಚಿವೆ ವಾಸುದೇವ ದೇವಾನಿ, ಈ ಶಾಲೆ ಹಾಗೂ ಅಗನವಾಡಿ ವಿಲೀನದ ಮಾದರಿ ಬಗ್ಗೆ ಸಂಬಂಧಿತ ಇಲಾಖೆಗಳ ಮಾರ್ಗಸೂಚಿಗಳನ್ನು ನಾವು ಕೇಂದ್ರ ಸರಕಾರಕ್ಕೆ ಒದಗಿಸಿದ್ದೇವೆ. ಇದು ಅವರಿಗೆ ವಿಸ್ತೃತ ಆಲೋಚನೆಗಳನ್ನು ನೀಡಲಿದೆ ಎಂದರು.

ಆರಂಭದಲ್ಲಿ ನಾವು 500 ಮೀಟರ್ ವ್ಯಾಪ್ತಿಯೊಳಗೆ ಇದ್ದ ಅಂಗನವಾಡಿ ಹಾಗೂ ಶಾಲೆಗಳನ್ನು ವಿಲೀನಗೊಳಿಸಿದೆವು. ಬಳಿಕ ಅಂಗನವಾಡಿ ಮತ್ತು ಶಾಲೆ ನಡುವೆ ತುಂಬಾ ಅಂತರವಿದ್ದ ಸ್ಥಳಗಳಲ್ಲಿ ಶಾಲೆ ಆವರಣದಲ್ಲಿ ಕಾರ್ಯನಿರ್ವಹಿಸಲು ಅಂಗನವಾಡಿಗೆ ಪ್ರತ್ಯೇಕ ಕೊಠಡಿ ನೀಡಿದೆವು. ಪಾಲನಾ ಕೇಂದ್ರದಲ್ಲಿ ಪ್ರತ್ಯೇಕ ಪಠ್ಯಕ್ರಮವನ್ನೂ ನಾವು ಪರಿಚಯಿಸಿದೆವು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News