ರಾಹುಲ್ ಭೇಟಿಯಾದ ಶರದ್ ಯಾದವ್

Update: 2017-07-27 15:10 GMT

ಹೊಸದಿಲ್ಲಿ, ಜು.27: ಈ ಮಧ್ಯೆ ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ ಹಿರಿಯ ಜೆಡಿಯು ಮುಖಂಡ ಶರದ್ ಯಾದವ್ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

  ನಿತೀಶ್ ಬುಧವಾರ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ, ಮಹಾಮೈತ್ರಿಯಿಂದ ಜೆಡಿಯು ಹೊರಬರಲಿದೆ ಎಂದು ಘೋಷಿಸಿದ ಬಳಿಕ ಮೌನಕ್ಕೆ ಶರಣಾಗಿದ್ದ ಯಾದವ್, ಗುರುವಾರ ರಾಹುಲ್ ಗಾಂಧಿಯನ್ನು ಭೇಟಿಮಾಡುವ ಮೂಲಕ ನಿತೀಶ್ ನಡೆಗೆ ಅಸಮಾಧಾನವನ್ನು ತೋರ್ಪಡಿಸಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಅಲ್ಲದೆ ಬಿಜೆಪಿ ಬೆಂಬಲದೊಂದಿಗೆ ನಿತೀಶ್ ಗುರುವಾರ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭ ಶರದ್ ಯಾದವ್ ದಿಲ್ಲಿಯಲ್ಲಿದ್ದರು.

ನಿತೀಶ್ ನಡೆಯನ್ನು ವಿರೋಧಿಸುತ್ತಿರುವ ಸಂಸದ ಅನ್ವರ್ ಆಲಿ ಮತ್ತಿತರ ಕೆಲ ಮುಖಂಡರ ಜೊತೆ ಶರದ್ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ಕೇಂದ್ರ ಸರಕಾರದಲ್ಲಿ ಸಚಿವ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಶರದ್ ಯಾದವ್ ಈ ರಾಜಕೀಯ ತಂತ್ರಗಾರಿಕೆ ಹೆಣೆದಿದ್ದಾರೆ ಎಂದೂ ಹೇಳಲಾಗುತ್ತಿದೆ. ಶರದ್ ಯಾದವ್ ಅವರು ವಿತ್ತಸಚಿವ ಅರುಣ್ ಜೇಟ್ಲಿಯವರನ್ನೂ ಭೇಟಿಯಾಗುವ ಕಾರ್ಯಕ್ರಮವಿದೆ. ಶರದ್ ತನ್ನ ಬಹುಕಾಲದ ಮಿತ್ರ ಎಂದು ಜೇಟ್ಲಿ ಬಣ್ಣಿಸಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News