ಡೋಕ್ ಲಾ ಬಿಕ್ಕಟ್ಟು ಸೌಹಾರ್ದ ಪರಿಹಾರಕ್ಕೆ ಭಾರತ ಬದ್ಧ: ಕೇಂದ್ರ

Update: 2017-07-27 17:14 GMT

ಹೊಸದಿಲ್ಲಿ, ಜು. 27: ಸಿಕ್ಕಿಂ ವಲಯದ ಡೋಕ್ ಲಾದಲ್ಲಿ ಭಾರತ ಹಾಗೂ ಚೀನಾ ಸೇನಾ ಪಡೆ ಬಿಕ್ಕಟ್ಟನ್ನು ಎರಡೂ ದೇಶಗಳು ಸ್ವೀಕಾರಾರ್ಹವಾದ ಸೌಹಾರ್ದ ಪರಿಹಾರ ಕಂಡುಕೊಳ್ಳಲು ಭಾರತ ಬದ್ಧವಾಗಿದೆ ಎಂದು ಗುರುವಾರ ಲೋಕಸಭೆಗೆ ತಿಳಿಸಲಾಯಿತು.

ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ. ಸಿಂಗ್, ಸರಕಾರ ಭೂತಾನ್‌ನೊಂದಿಗೆ ನಿರಂತರ ಮಾತುಕತೆಯಲ್ಲಿ ತೊಡಗಿದೆ ಎಂದ ಲಿಖಿತ ಹೇಳಿಕೆಯಲ್ಲಿ ತಿಳಿಸಿದರು.

ವಿವಾದಿತ ಸ್ಥಳದಲ್ಲಿ ಚೀನಾ ಸೇನೆ ರಸ್ತೆ ನಿರ್ಮಿಸುವುದನ್ನು ಭಾರತ ಸೇನೆ ತಡೆದ ತಿಂಗಳ ಬಳಿಕ ಟಿಬೇಟ್‌ನ ಅತೀ ದಕ್ಷಿಣದ ಭಾಗವಾದ ಡೋಕ್ ಲಾ ಪ್ರದೇಶದಲ್ಲಿ ಭಾರತ ಹಾಗೂ ಚೀನಾ ಯೋಧರು ಮುಖಾಮುಖಿಯಾಗುವುದು ತಪ್ಪಿದಂತಾಗಿದೆ. ಈ ಭಾಗವನ್ನು ಭೂತಾನ್ ಕೂಡ ತನ್ನದೆಂದು ಹೇಳುತ್ತಿದೆ.

ತನ್ನ ಭೂಪ್ರದೇಶದ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಿಸಲಾಗುತ್ತಿತ್ತು ಎಂದು ಚೀನಾ  ಪ್ರತಿಪಾದಿಸಿದೆ. ಹಾಗೂ ಕೂಡಲೇ ಈ ಪ್ರದೇಶದಿಂದ ಸೇನೆಯನ್ನು ಹಿಂದೆ ತೆಗೆಯುವಂತೆ ಭಾರತವನ್ನು ಆಗ್ರಹಿಸಿದೆ.

ಡೋಕ್ ಲಾ ಪ್ರದೇಶದಲ್ಲಿ ಚೀನಾ ಸೇನೆಯ ಕಾರ್ಯ ಯಥಾಸ್ಥಿತಿಯಲ್ಲಿ ಪ್ರಮುಖ ಬದಲಾವಣೆ ಉಂಟಾಗಲು ಕಾರಣವಾಗಿದೆ. ಇದರಿಂದ ಗಡಿ ವಿಷಯದಲ್ಲಿ ತಲುಪಲಾದ ಎರಡು ರಾಷ್ಟ್ರಗಳ ದ್ವಿಪಕ್ಷೀಯ ಒಪ್ಪಂದಕ್ಕೆ ತೊಂದರೆ ಉಂಟಾಗಲಿದೆ ಎಂದು ಚೀನಕ್ಕೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News