ಸ್ವಾಮಿ ಗಂಗೇಶಾನಂದ ಲೈಂಗಿಕ ಕಿರುಕುಳ ನೀಡಿಲ್ಲ: ಯುವತಿಯ ಹೇಳಿಕೆ

Update: 2017-07-28 08:40 GMT

ಕೊಚ್ಚಿ,ಜು. 28: ಸ್ವಾಮಿ ಗಂಗೇಶಾನಂದ ತನಗೆ ಲೈಂಗಿಕವಾಗಿ ಕಿರುಕುಳ ನೀಡಿಲ್ಲ ಆತ ನಿರಪರಾಧಿಯೆಂದು ಗಂಗೇಶಾಂದರ ಮರ್ಮಾಂಗ ಕತ್ತರಿಸಿದ ಯುವತಿ ಹೈಕೋರ್ಟಿನಲ್ಲಿ ಹೇಳಿಕೆ ನೀಡಿದ್ದಾಳೆ. ಪೊಲೀಸರ ಒತ್ತಡಕ್ಕೆ ಮಣಿದು ಮ್ಯಾಜಿಸ್ಟ್ರೇಟ್ ಮುಂದೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಹೇಳಿರುವುದಾಗಿ ಯುವತಿ ಕೋರ್ಟಿಗೆ ತಿಳಿಸಿದ್ದಾಳೆ.

ಮೇ. 19ರಂದು  ಯುವತಿ ಸ್ವಾಮಿಯ ಮರ್ಮಾಂಗ ಕತ್ತರಿಸಿದ ಘಟನೆ ನಡೆದಿತ್ತು. ಗಂಭೀರಗಾಯಗೊಂಡ ಸ್ವಾಮೀಜಿಯನ್ನು  ಪೊಲೀಸರು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು. ಲೈಂಗಿಕ ಕಿರುಕುಳಕ್ಕಾಗಿ ಸ್ವಾಮೀಜಿಯ ವಿರುದ್ಧ ಪೊಲೀಸರುಕೇಸು  ದಾಖಲಿಸಿದ್ದರು.  ನಂತರ ಯುವತಿ ಪೊಲೀಸರಿಗೆ ಅದೇರೀತಿ ಸಾಕ್ಷ್ಯ ನುಡಿದಿದ್ದಳು. ಆದರೆ, ಈಗ ಯುವತಿ ಸ್ವಾಮಿ ನನಗೆ ಯಾವಾಗಲೂ ಲೈಂಗಿಕ ಕಿರುಕುಳ ನೀಡಿಲ್ಲ. ಮಗಳಂತೆ ತನ್ನೊಂದಿಗೆ ವರ್ತಿಸಿದ್ದರು  ಎಂದು ಹೈಕೋರ್ಟಿಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾಳೆ. ತನ್ನ ಅರಿವಿನೊಂದಿಗೆ  ಪೊಲೀಸರು ಎಫ್‍ಐಆರ್ ದಾಖಲಿಸಿಲ್ಲ. ಅದನ್ನು ತಾನು ಓದಿಲ್ಲ. ಅದರಲ್ಲಿರುವ ವಿವರಗಳು ತನಗೆ ತಿಳಿಸದೆ ಪೊಲೀಸರು ಸಹಿಹಾಕಿಸಿಕೊಂಡಿದ್ದಾರೆ. ಪೊಲೀಸರ ಒತ್ತಡಕ್ಕೆ ಮಣಿದು ಮ್ಯಾಜಿಸ್ಟ್ರೇಟ್‍ರ ಮುಂದೆ ಸ್ವಾಮಿಯ ವಿರುದ್ಧ  ಹೇಳಿಕೆ ನೀಡಿದ್ದೇನೆ. ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡುವವರೆಗೂ ತನ್ನ ಅಮ್ಮನನ್ನು ಪೊಲೀಸರು ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದರು ಎಂದು ಯುವತಿ ತಿಳಿಸಿದ್ದಾಳೆ.

 ನಿರ್ಭಯ ಕೇಂದ್ರದಲ್ಲಿರಿಸಿದ್ದ ತನ್ನನ್ನು, ತಂದೆತಾಯಿಯನ್ನೋ, ಸಹೋದರನನ್ನೋ ಭೇಟಿಯಾಗಲು ಅವಕಾಶ ನೀಡಿರಲಿಲ್ಲ. ಪೊಲೀಸರ ಸೂಚನೆಯಂತೆ ನಡೆದುಕೊಳ್ಳುವುದಲ್ಲದೆ ಬೇರೆ ದಾರಿಯಿರಲಿಲ್ಲ. ಸ್ವಾಮಿಗೂ ತನ್ನ ಕುಟುಂಬಕ್ಕೂ ಒಳ್ಳೆಯ ಸಂಬಂಧ ಇದೆ. ಕಾನೂನು ವ್ಯಾಸಂಗ ಮಾಡಲು ಸ್ವಾಮಿಯೇ ಪ್ರೇರೇಪಿಸಿದ್ದರು. ಸ್ವಾಮೀ ಲೈಂಗಿಕ ಕಿರುಕುಳನೀಡಿಲ್ಲ ಎಂದು ಯುವತಿ ಹೇಳಿದ್ದಾಳೆ.

ಗಂಗೇಶಾನಂದರ ಆರೋಗ್ಯಸ್ಥಿತಿಯ ಕುರಿತು ಸರಕಾರ ವರದಿ ಸಲ್ಲಿಸಬೇಕೆಂದು ಕೋರ್ಟು ಸೂಚಿಸಿದೆ. ಅವರ ಆರೋಗ್ಯ ಬಿಗಡಾಯಿಸಿದ್ದು ಜಾಮೀನು ನೀಡಬೇಕೆಂದು ಹೈಕೋರ್ಟಿಗೆ ಅರ್ಜಿಸಲ್ಲಿಸಲಾಗಿದೆ. ಆಂಟಿಬಯಾಟಿಕ್ ಪರಿಣಾಮ ಬೀರುವುದಿಲ್ಲ. ಜೀವ ಅಪಾಯದಲ್ಲಿದೆ ಎಂದು ಅರ್ಜಿದಾರನ ವಕೀಲರು ಕೋರ್ಟಿಗೆ ತಿಳಿಸಿದ್ದಾರೆ. ಮೆಡಿಕಲ್ ಕಾಲೇಜಿನಲ್ಲಿ ಎಲ್ಲರೀತಿಯ ಚಿಕಿತ್ಸೆಯನ್ನು ಸ್ವಾಮಿಗೆ ನೀಡಲಾಗುತ್ತಿದೆ ಎಂದು ಸರಕಾರ ಕೋರ್ಟಿಗೆ ಭರವಸೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News