ಪುತ್ರಿ ವಿವಾಹಕ್ಕೆ 6 ತಿಂಗಳು ರಜೆಗೆ ರಾಜೀವ್ ಗಾಂಧಿ ಹತ್ಯೆ ಅಪರಾಧಿ ಮನವಿ
Update: 2017-07-28 20:40 IST
ಚೆನ್ನೈ, ಜು. 28: ತನ್ನ ಪುತ್ರಿಯ ವಿವಾಹದ ಸಿದ್ಧತೆಗಾಗಿ 6 ತಿಂಗಳು ಸಾಮಾನ್ಯ ರಜೆ ನೀಡುವಂತೆ ಕೋರಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ನಳಿನಿ ಶ್ರೀಹರನ್ ಮದ್ರಾಸ್ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಹಾಗೂ ಕಾರಾಗೃಹದ ಐಜಿಯಲ್ಲಿ ಪರೋಲ್ ನೀಡುವಂತೆ ಕೋರಲು ಆಕೆ ತನ್ನ ಪ್ರತಿನಿಧಿಯನ್ನು ಕಳುಹಿಸಿಕೊಟ್ಟಿದ್ದಾಳೆ. ಆದರೆ, ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಳಿನಿಯನ್ನು ವೆಳ್ಳೂರಿನ ವಿಶೇಷ ಮಹಿಳಾ ಜೈಲಿನಲ್ಲಿ ಇರಿಸಲಾಗಿದೆ.