ಸಿಟ್ ಮುಂದೆ ಹಾಜರಾದ ನಟ ರವಿತೇಜಾ
Update: 2017-07-28 22:44 IST
ಹೈದರಾಬಾದ್, ಜು. 28: ಹೈದರಾಬಾದ್ ಮಾದಕ ದ್ರವ್ಯ ಜಾಲ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ ಟಾಲಿವುಡ್ ನಟ ರವಿತೇಜನನ್ನು ವಿಚಾರಣೆ ನಡೆಸಿದೆ. ರವಿತೇಜ ವಿಶೇಷ ತನಿಖಾ ತಂಡದ ಕಚೇರಿಗೆ ಆಗಮಿಸಿದಾಗ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿಗಳಾದ ಕೆಲ್ವಿನ್ ಹಾಗೂ ಆತನ ಸಹವರ್ತಿ ಝೀಶನ್‌ನೊಂದಿಗೆ ಇದ್ದ ಸಂಬಂಧದ ಬಗ್ಗೆ ತನಿಖಾಧಿಕಾರಿಗಳು ವಿಚಾರಣೆ ನಡೆಸಿದರು.
ತಾನು ಮಾದಕ ದ್ರವ್ಯ ವ್ಯಸನಿ ಅಲ್ಲ. ವಿಶೇಷ ತನಿಖಾ ತಂಡದ ತನಿಖೆಗ ತಾನು ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ರವಿತೇಜ ನಿನ್ನೆ ಮಾಧ್ಯಮಗಳಿಗೆ ತಿಳಿಸಿದ್ದರು. ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂದಿಸಿ ತೆಲಂಗಾಣ ಅಬಕಾರಿ ಹಾಗೂ ಮಾದಕ ದ್ರವ್ಯ ನಿಯಂತ್ರಣ ಇಲಾಖೆಯ ವಿಶೇಷ ತನಿಖಾ ತಂಡ ರವಿತೇಜನಿಗೆ ನೊಟೀಸು ಜಾರಿ ಮಾಡಿತ್ತು.