ಆಮಿಯ ದೃಶ್ಯಗಳು ವೈರಲ್

Update: 2017-07-28 17:28 GMT

ಖ್ಯಾತ ಸಾಹಿತಿ ಕಮಲಾ ಸುರೈಯಾ ಅವರ ಬದುಕನ್ನು ಆಧರಿಸಿದ ‘ಆಮಿ’ ಮಲಯಾಳಂ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಖ್ಯಾತ ನಿರ್ದೇಶಕ ಕಮಲ್ ನಿರ್ದೇಶದ ಈ ಚಿತ್ರದಲ್ಲಿ ಖ್ಯಾತ ನಟಿ ಮಂಜುವಾರಿಯರ್ ಕಥಾನಾಯಕಿ ‘ಆಮಿ’ಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೂಟಿಂಗ್ ಲೊಕೇಶನ್‌ಗಳಿಂದ ತೆಗೆದ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣ ಗಳಲ್ಲಿ ಪ್ರಸಾರವಾಗಿದ್ದು, ಅಪಾರ ಸಂಖ್ಯೆಯ ಚಿತ್ರಪ್ರೇಮಿಗಳ ಮನಸೂರೆಗೊಂಡಿದೆ. ಕೆಂಪು ಸೀರೆಯುಟ್ಟ ಮಂಜು ವಾರಿಯರ್ ಸಮುದ್ರ ತೀರದಲ್ಲಿ ಒಂಟಿಯಾಗಿ ನಿಂತಿರುವ ದೃಶ್ಯವು ಈಗಾಗಲೇ ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ. ಚಿತ್ರೀಕ ರಣಕ್ಕೆ ಮುನ್ನ ಶೂಟ್ ಮಾಡಲಾದ ಮಂಜುವಾರಿಯರ್ ಆಮಿಯ ಗೆಟಪ್‌ನಲ್ಲಿರುವ ಚಿತ್ರಗಳು ಈ ಮೊದಲು ಪ್ರಸಾರವಾಗಿದ್ದವು.

ಅಂದಹಾಗೆ ಆಮಿಯ ಪಾತ್ರಕ್ಕೆ ಮೊದಲಿಗೆ ಖ್ಯಾತ ನಟಿ ವಿದ್ಯಾಬಾಲನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ವಿದ್ಯಾಬಾಲನ್ ಏಕಾಏಕಿಯಾಗಿ ಚಿತ್ರದಿಂದ ಹೊರಗೆ ಬಂದ ಬಳಿಕ ಆ ಪಾತ್ರವು ಮಂಜುವಾರಿಯರ್‌ಗೆ ಒಲಿದಿತ್ತು. ‘ಕೃಷ್ಣಗುಡಿಯಿಲ್ ಒರು ಪ್ರಣಯಕಾಲತ್’್ತ ಬಳಿಕ ಮಂಜು ವಾರಿಯರ್ ನಟಿಸಿರುವ ಕಮಲ್ ನಿರ್ದೇಶನದ ಎರಡನೆ ಚಿತ್ರ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News