ಸ್ಪೈಡರ್ ಗೆ ದಾಖಲೆ ಬೆಲೆ

Update: 2017-07-28 17:38 GMT

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್‌ಬಾಬು ಹಾಗೂ ನಿರ್ದೇಶಕ ಮುರುಗದಾಸ್ ಕಾಂಬಿನೇಶನ್‌ನಲ್ಲಿ ನಿರ್ಮಾಣಗೊಂಡಿರುವ ಸ್ಪೈಡರ್ ಚಿತ್ರದ ತಮಿಳುನಾಡಿನ ಪ್ರದರ್ಶನದ ಹಕ್ಕುಗಳನ್ನು ಖ್ಯಾತ ಚಿತ್ರನಿರ್ಮಾಣ ಸಂಸ್ಥೆ ಲಿಕ್ರಾ ಪ್ರೊಡಕ್ಷನ್ಸ್ ದಾಖಲೆ ಬೆಲೆಗೆ ಖರೀದಿಸಿದೆ. ದಕ್ಷಿಣ ಭಾರತದ ಚಿತ್ರಪ್ರೇಮಿಗಳು ಅತ್ಯಂತ ಕಾತರದಿಂದ ಕಾಯುತ್ತಿರುವ ಸ್ಪೈಡರ್ ತೆಲುಗು ಹಾಗೂ ತಮಿಳಿನಲ್ಲಿ ಏಕಕಾಲದಲ್ಲಿ ನಿರ್ಮಾಣಗೊಂಡಿದೆ.
ಗೂಢಚಾರಿಕೆಯ ಥ್ರಿಲ್ಲರ್ ಕಥಾವಸ್ತುವನ್ನು ಹೊಂದಿರುವ ಸ್ಪೈಡರ್ ಚಿತ್ರದ ತಮಿಳುನಾಡು ವಿತರಣೆಯ ಹಕ್ಕುಗಳನ್ನು ಲಿಕ್ರಾ ಪ್ರೊಡಕ್ಷನ್ಸ್ ಬರೋಬ್ಬರಿ 25 ಕೋಟಿ ರೂ.ಗೆ ಖರೀದಿಸಿದೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸ್ಪೈಡರ್ ಚಿತ್ರವು ಈದುಲ್ ಫಿತ್ರ್‌ನ ವೇಳೆಗೆ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರದ ಶೂಟಿಂಗ್ ಸಕಾಲದಲ್ಲಿ ಪೂರ್ಣಗೊಳ್ಳದೆ ಇದ್ದುದರಿಂದ ಆಗಸ್ಟ್‌ಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಹಬ್ಬದ ರಜೆಗಳನ್ನು ಗಮನದಲ್ಲಿಟ್ಟುಕೊಂಡು ಸೆಪ್ಟಂಬರ್‌ನಲ್ಲಿ ಸ್ಪೈಡರ್ ಬಿಡುಗಡೆ ಖಚಿತವೆಂದು ಚಿತ್ರತಂಡದ ಅಂಬೋಣ.

ಕಳೆದ ವರ್ಷದ ಜುಲೈನಿಂದ ನಿರಂತರವಾಗಿ ಸ್ಪೈಡರ್‌ಗಾಗಿ ಬೆವರು ಹರಿಸಿರುವ ಮುರುಗಾದಾಸ್, ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಸ್ಪೈಡರ್ ಪೂರ್ಣ ಗೊಳ್ಳುತ್ತಿದ್ದಂತೆಯೇ ಮಹೇಶ್, ‘ಭರತ್ ಅನೆ ನೇನು’ ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಕೊರಟಾಲ ಶಿವ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News