ಲಕ್ನೋ ಸೆಂಟ್ರಲ್ ನಲ್ಲಿ ಫರ್ಹಾನ್

Update: 2017-07-28 17:44 GMT

ಪ್ರತಿಭಾವಂತ ನಟ, ನಿರ್ದೇಶಕ ಫರ್ಹಾನ್ ಖಾನ್ ನಟಿಸುತ್ತಿರುವ ಲಕ್ನೋ ಸೆಂಟ್ರಲ್ ಚಿತ್ರದ ಫಸ್ಟ್‌ಲುಕ್ ಬಾಲಿವುಡ್‌ನಲ್ಲಿ ಸಖತ್ ಕ್ರೇಝ್ ಸೃಷ್ಟಿಸಿದೆ. ಈ ಚಿತ್ರದಲ್ಲಿ ಫರ್ಹಾನ್, ಕಿಶನ್ ಮೋಹನ್ ಗಿರ್ಹೋತ್ರಾ ಎಂಬ ‘ಕ್ರಿಮಿನಲ್’ ಕೈದಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಆದರೆ ಲಕ್ನೋ ಸೆಂಟ್ರಲ್ ಚಿತ್ರದ ಕಥೆಯ ಬಗ್ಗೆ ನಿರ್ದೇಶಕ ರಂಜಿತ್ ತಿವಾರಿಯಾಗಲಿ, ನಿರ್ಮಾಪಕ ನಿಖಿಲ್ ಅಡ್ವಾಣಿಯಾಗಲಿ ಈವರೆಗೆ ಗುಟ್ಟುಬಿಟ್ಟುಕೊಟ್ಟಿಲ್ಲ.
‘‘ಇದೊಂದು ಜೈಲ್ ಎಸ್ಕೇಪ್ ಕುರಿತಾದ ಕಥಾವಸ್ತುವನ್ನು ಹೊಂದಿರುವ ಚಿತ್ರ. ಕಥೆಗೆ ಬಲವಾದ ಸೆಂಟಿಮೆಂಟಲ್ ಟಚ್ ಕೂಡಾ ನೀಡಲಾಗಿದೆ. ಇದರ ಜೊತೆಗೆ ಜೈಲುವಾಸಿಗಳ ಕನಸುಗಳ ಹಾಗೂ ಆಶೋತ್ತರಗಳು, ಮುಗ್ಧತೆ ಹಾಗೂ ಅವರನ್ನು ಕಾಡುವ ತಪ್ಪಿತಸ್ಥ ಮನೋಭಾವ ಇವೆಲ್ಲವೂ ಚಿತ್ರದಲ್ಲಿ ಮಾರ್ಮಿಕವಾಗಿ ಮೂಡಿಬರಲಿದೆಯೆಂದು’’ ನಿರ್ಮಾಪಕ ನಿಖಿಲ್ ಅಡ್ವಾಣಿ ಹೇಳುತ್ತಾರೆ. ಚಿತ್ರದಲ್ಲಿ ಫರ್ಹಾನ್ ಅತ್ಯದ್ಭುತವಾಗಿ ಅಭಿನಯಿಸಿದ್ದಾರೆ’ ಎಂದವರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

ಆದಾಗ್ಯೂ ‘ಲಕ್ನೋ ಸೆಂಟ್ರಲ್’ಗೂ, ಅರ್ಜುನ್ ರಾಮ್‌ಪಾಲ್ ನಾಯಕನಾಗಿರುವ ನೂತನ ಚಿತ್ರ ಡ್ಯಾಡಿಯ ಕಥೆಯಲ್ಲೂ ತುಸು ಸಾಮ್ಯತೆಗಳಿವೆಯೆಂಬ ಪಿಸುಮಾತುಗಳು ಬಾಲಿವುಡ್ ಅಂಗಳದಲ್ಲಿ ತೇಲಿಬರುತ್ತಿವೆ. ಡ್ಯಾಡಿ ಚಿತ್ರವು ಗ್ಯಾಂಗ್‌ಸ್ಟರ್-ರಾಜಕಾರಣಿ ಅರುಣ್ ಗಾವ್ಲಿಯ ಕುರಿತಾದ ಕಥೆಯನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News