ಅಕ್ಷರ ಹಾಸನ್ ಬೌದ್ಧ ಧರ್ಮಕ್ಕೆ
Update: 2017-07-28 23:18 IST
ಹೊಸದಿಲ್ಲಿ, ಜು. 28: ಜನಪ್ರಿಯ ಚಿತ್ರನಟ ಕಮಲಹಾಸನ್ ಪುತ್ರಿ ಹಾಗೂ ಚಿತ್ರನಟಿ ಅಕ್ಷರ ಹಾಸನ್ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ತಾನು ಬುದ್ಧನ ತತ್ವದತ್ತ ಆಕರ್ಷಿತನಾದೆ. ಈ ಹಿನ್ನೆಲೆಯಲ್ಲಿ ಬೌದ್ಧ ಧರ್ಮಕ್ಕೆ ಮತಾಂತರ ಹೊಂದುವ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಚೆನ್ನೈಯ ಪತ್ರಿಕಾಗೋಷ್ಠಿಯಲ್ಲಿ ಅಕ್ಷರ ಹಾಸನ್ ಮುಂಬೈಯಲ್ಲಿ ಸಹನಿರ್ದೇಶಕರಾಗಿ ನಡೆಸಿದ ಹೋರಾಟ ಹಾಗೂ ಸಹೋದರಿ ಶ್ರುತಿ ಹಾಸನ್ ನಂತೆ ನಟಿಯಾಗಿ ಬೆಳವಣಿಗೆಯಾದ ಬಗ್ಗೆ ವಿವರಿಸಿದ್ದಾರೆ