ಸದ್ದು ಮಾಡುತ್ತಿದೆ ದಿ ಈಡಿಯಟ್

Update: 2017-07-28 17:48 GMT

ಸ್ಲಂಡಾಗ್ ಮಿಲಿಯನೇರ್ ನಟ ಖ್ಯಾತಿಯ ಅರ್ಫಿ ಲಾಂಬಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ‘ದಿ ಈಡಿಯಟ್’ ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ 40ನೆ ಏಶ್ಯನ್ ಅಮೆರಿಕನ್ ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ರುಚಿ ಜೋಶಿ ಹಾಗೂ ಶ್ರೀರಾಮ್ ಗಂಗೋಪಾಧ್ಯಾಯ್ ನಿರ್ಮಿಸಿರುವ ಭಾರತದ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದೆ.

 ನೈಜಘಟನೆಗಳಿಂದ ಪ್ರೇರಿತವಾಗಿರುವ ಈ ಚಿತ್ರವು ರಾಜಕೀಯ ಸ್ವಾರ್ಥಕ್ಕಾಗಿ ಅಲ್ಪಸಂಖ್ಯಾತರ ಬಗ್ಗೆ ಅಪಪ್ರಚಾರ ಮಾಡುವ ರಾಜಕಾರಣಿಗಳ ಕುರಿತಾದ ವಿಡಂಬನಾತ್ಮಕ ಕಥಾವಸ್ತುವನ್ನು ಹೊಂದಿದೆ. ಏಶ್ಯನ್ ಅಮೆರಿಕನ್ ಚಲನಚಿತ್ರೋತ್ಸವ ಪ್ರದರ್ಶನಗೊಳ್ಳಲಿರುವ ಜೊತೆಗೆ ಈ ಕಿರುಚಿತ್ರವು ಜುಲೈ 27ರಂದು ವಿಶ್ವದಾದ್ಯಂತ ಬಿಡುಗಡೆಗೊಂಡಿದೆ. ಅಕ್ಷಯ್‌ಕುಮಾರ್ ಅಭಿನಯದ ‘ಸಿಂಗ್ ಇಸ್ ಬ್ಲಿಂಗ್’ ಚಿತ್ರದಲ್ಲಿ ಕಾಮಿಡಿ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದ ಅರ್ಫಿ ಲಾಂಬಾ, ‘ದಿ ಈಡಿಯಟ್’ ತನ್ನ ಸಿನೆಮಾ ಬದುಕಿಗೆ ಹೊಸ ಮೈಲುಗಲ್ಲಾಗಲಿದೆ ಎಂಬ ಭರವಸೆ ಹೊಂದಿದ್ದಾರೆ. ಈ ಕಿರುಚಿತ್ರಕ್ಕೆ ವಿಮರ್ಶಕರ, ಪ್ರೇಕ್ಷಕರ ಮುಕ್ತಕಂಠದ ಪ್ರಶಂಸೆ ದೊರೆತಿರುವುದು ಅವರ ಸಂತಸವನ್ನು ಇಮ್ಮಡಿಗೊಳಿಸಿದೆ. ಇಸ್ಲಾಮ್ ಬಗ್ಗೆ ಅಪಪ್ರಚಾರವನ್ನು (ಇಸ್ಲಾಮ್ ಫೋಬಿಯಾ) ಹರಡುವ ಮೂಲಕ ರಾಜಕಾರಣಿಗಳು ಸಮಾಜದಲ್ಲಿ ಒಡಕನ್ನು ಸೃಷ್ಟಿಸುತ್ತಿರುವ ಬಗ್ಗೆ ಬೆಳಕು ಚೆಲ್ಲುವ ಈ ಚಿತ್ರದಲ್ಲಿ ನಟಿಸಿರುವುದು ತನಗೆ ಹೆಮ್ಮೆಯೆನಿಸಿದೆ ಎಂದವರು ಹೇಳುತ್ತಾರೆ. ಮುಂದೆಯೂ ಇಂತಹ ಸಾಮಾಜಿಕ ಜಾಗೃತಿಯ ಚಿತ್ರಗಳಲ್ಲಿ ನಟಿಸುವ ಇಚ್ಛೆಯಿದೆ ಎಂದವರು ಹೇಳುತ್ತಾರೆ.

ಅಂದ ಆಗೆ ಆರ್ಫಿ ಲಾಂಬಾ ಕಿರುಚಿತ್ರಗಳಲ್ಲಿ ನಟಿಸಿರುವುದು ಇದು ಮೊದಲೇನಲ್ಲ. ಈ ಹಿಂದೆ ಅವರು ‘ಶೂನ್ಯತಾ’ (2007), ‘ಎ ಪರ್ಫೆಕ್ಟ್ ಮರ್ಡರ್’ (2007) ಹಾಗೂ ರೋಹನ್ ಸಬರ್‌ವಾಲ್ ಅವರ ‘ಶೇಡ್ಸ್ ಆಫ್ ಗ್ರೇ’ ಎಂಬ ಕಿರುಚಿತ್ರಗಳಲ್ಲಿ ನಟಿಸಿದ್ದರು. ಇದರ ಜೊತೆಗೆ ‘ಪ್ರೇಗ್’, ‘ಲೊಯೆವ್’ ಹಾಗೂ ‘ಫುಗ್ಲಿ’ ಎಂಬ ಕಥಾಚಿತ್ರಗಳಲ್ಲೂ ಅವರು ಅಭಿನಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News