ಮಂಜು ವಾರಿಯರ್ ದಿಲೀಪ್ ರ ಮೊದಲ ಪತ್ನಿಯಲ್ಲ..!

Update: 2017-08-03 12:54 GMT

ತಿರುವನಂತಪುರಂ, ಆ.3: ನಟಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಖ್ಯಾತ ನಟ ದಿಲೀಪ್ ನಟಿ ಮಂಜು ವಾರಿಯರ್ ಅವರನ್ನು ಮದುವೆಯಾಗುವುದಕ್ಕೂ ಮುನ್ನ ಬೇರೊಬ್ಬರನ್ನು ವಿವಾಹವಾಗಿದ್ದರು ಎನ್ನುವ ವಿಷಯ ಬೆಳಕಿಗೆ ಬಂದಿದೆ.

ಈ ಬಗ್ಗೆ ಮನೋರಮಾ ಆನ್ ಲೈನ್ ಸುದ್ದಿಯೊಂದನ್ನು ಪ್ರಕಟಿಸಿದ್ದು, ಮಂಜು ವಾರಿಯರ್ ರನ್ನು ವಿವಾಹವಾಗುವುದಕ್ಕೂ ಮೊದಲು ದಿಲೀಪ್ ಆಲುವದಲ್ಲಿ ಸಂಬಂಧಿಕರೋರ್ವರ ಮಗಳನ್ನು ವಿವಾಹವಾಗಿದ್ದರು ಎನ್ನಲಾಗಿದೆ.

ನಟಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯ ವೇಳೆ ದಿಲೀಪ್ ರ ಮೊದಲ ವಿವಾಹದ ಸತ್ಯ ಹೊರಬಿದ್ದಿದೆ ಎನ್ನಲಾಗಿದೆ. ದಿಲೀಪ್ ಚಿತ್ರರಂಗಕ್ಕೆ ಕಾಲಿಡುವ ಮುನ್ನ ಅಂದರೆ 1990ರ ಮೊದಲು ಈ ವಿವಾಹ ನಡೆದಿತ್ತು ಎಂದು ಮನೋರಮಾ ಆನ್ ಲೈನ್ ಪ್ರಕಟಿಸಿದೆ. ಆ ಮಹಿಳೆ ಗಲ್ಫ್ ನಲ್ಲಿದ್ದಾರೆ ಎಂದು ತಿಳಿದುಬಂದಿದೆ.

1998ರ ಅಕ್ಟೋಬರ್ 20ರಂದು ದಿಲೀಪ್ ಮಂಜು ವಾರಿಯರ್ ರನ್ನು ವಿವಾಹವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News