×
Ad

ರಾಜಕುಮಾರ ಫಿಲಿಪ್ ನಿಧನ ಎಂಬ ತಪ್ಪು ಸುದ್ದಿ ಪ್ರಕಟಿಸಿದ ಪತ್ರಿಕೆ

Update: 2017-08-03 21:53 IST

ಲಂಡನ್, ಆ. 3: ಬ್ರಿಟನ್‌ನ ರಾಜಕುಮಾರ ಫಿಲಿಪ್ ನಿಧನರಾಗಿದ್ದಾರೆ ಎಂಬ ಸುದ್ದಿಯನ್ನು ಬುಧವಾರ ಪ್ರಕಟಿಸಿರುವ ಬ್ರಿಟಿಶ್ ಪತ್ರಿಕೆ ‘ಡೇಲಿ ಟೆಲಿಗ್ರಾಫ್’ ದೊಡ್ಡ ಎಡವಟ್ಟೊಂದನ್ನು ಮಾಡಿದೆ.

 ಡ್ಯೂಕ್ ಆಫ್ ಎಡಿನ್‌ಬರ್ಗ್ ತನ್ನ ಕೊನೆಯ ಸಾರ್ವಜನಿಕ ಕರ್ತವ್ಯ ನಿರ್ವಹಿಸಲು ಸಿದ್ಧತೆ ನಡೆಸುತ್ತಿದ್ದ ಹೊತ್ತಿನಲ್ಲೇ ಈ ಸುದ್ದಿ ಆನ್‌ಲೈನ್‌ನಲ್ಲಿ ಪ್ರಕಟಗೊಂಡಿತು.

‘ಡ್ಯೂಕ್ ಆಫ್ ಎಡಿನ್‌ಬರ್ಗ್, ರಾಜಕುಮಾರ ಫಿಲಿಪ್ ನಿಧನ, ಪ್ರಾಯ...’ ಎಂಬ ತಲೆಬರಹದ ಲೇಖನದಲ್ಲಿ ಅವರ ಬದುಕು ಮತ್ತು ಸಾಧನೆಗಳ ಬಗ್ಗೆ ವಿವರಿಸಲಾಗಿದೆ.

ರಾಜಕುಮಾರ ಫಿಲಿಪ್ ಸಾಯುವ ಸಂದರ್ಭದಲ್ಲಿ ಪ್ರಕಟಿಸುವುದಕ್ಕಾಗಿ ಈ ಸುದ್ದಿಯನ್ನು ಮುಂಚಿತವಾಗಿಯೇ ತಯಾರಿಸಿಡಲಾಗಿದ್ದು, ಅದು ಪ್ರಮಾದವಶಾತ್ ಪ್ರಕಟಗೊಂಡಿದೆ ಎಂದು ಹೇಳಲಾಗಿದೆ.

ಈ ಲೇಖನದಲ್ಲಿ ಮುಂದಕ್ಕೆ ತುಂಬಿಸಿಕೊಳ್ಳುವುದಕ್ಕಾಗಿ ಸಾಕಷ್ಟು ಖಾಲಿ ಜಾಗಗಳನ್ನು ಬಿಡಲಾಗಿತ್ತು.

ಕೆಲವೇ ನಿಮಿಷಗಳಲ್ಲಿ ಅದನ್ನು ವೆಬ್‌ಸೈಟ್‌ನಿಂದ ತೆಗೆಯಲಾಯಿತಾದರೂ, ಅದರ ಸ್ಕ್ರೀನ್‌ಶಾಟ್‌ಗಳು ಅದಾಗಲೇ ಸಾಮಾಜಿಕ ಜಾಲತಾಣಗಳಿಗೆ ಪ್ರವೇಶ ಪಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News