×
Ad

ಮದ್ಯಸೇವನೆ ತಪಾಸಣೆಯಲ್ಲಿ ಸಿಕ್ಕಿಬಿದ್ದ ಪೈಲಟ್ ಲೈಸೆನ್ಸ್ ರದ್ದು

Update: 2017-08-05 18:23 IST

ಹೊಸದಿಲ್ಲಿ, ಆ.5: ಖಾಸಗಿ ವಿಮಾನಯಾನ ಸಂಸ್ಥೆ ಸ್ಪೈಸ್‌ಜೆಟ್‌ನ ಪೈಲಟ್ ಆಲ್ಕೋಹಾಲ್ (ಮದ್ಯಸೇವನೆ) ತಪಾಸಣೆಯಲ್ಲಿ ಮೂರು ಬಾರಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಅವರ ಲೈಸೆನ್ಸನ್ನು ರದ್ದುಪಡಿಸಲಾಗಿದೆ.

  ಸ್ಪೈಸ್‌ಜೆಟ್ ಬೋಯಿಂಗ್ ವಿಮಾನ ಎಸ್‌ಜಿ 114ರ ಪೈಲಟ್ ಜುಲೈ 11ರಂದು ಮೂರನೇ ಬಾರಿ ನಡೆಸಲಾದ ಮದ್ಯಸೇವನೆ ತಪಾಸಣೆ ಸಂದರ್ಭವೂ ಸಿಕ್ಕಿಬಿದ್ದ ಕಾರಣ ಅವರ ‘ಏರ್‌ಲೈನ್ ಟ್ರಾನ್ಸ್‌ಪೋರ್ಟ್ ಪೈಲಟ್ ಲೈಸೆನ್ಸ್ ’ ರದ್ದುಪಡಿಸಲಾಗಿದೆ ಎಂದು ವಿಮಾನಯಾನ ನಿಯಂತ್ರಣ ಸಂಸ್ಥೆ (ಡಿಜಿಸಿಎ)ಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

 ವಿಮಾನಯಾನ ನಿಯಮದ ಪ್ರಕಾರ, ವಿಮಾನಗಳ ಸಿಬ್ಬಂದಿ ವರ್ಗದವರು ವಿಮಾನಯಾನ ಆರಂಭಕ್ಕೆ 12 ಗಂಟೆ ಮೊದಲು ಮದ್ಯಪಾನ ಮಾಡುವಂತಿಲ್ಲ. ವಿಮಾನ ಚಲಾಯಿಸುವ ಮೊದಲು ಮತ್ತು ವಿಮಾನ ಪ್ರಯಾಣದ ಅಂತ್ಯದಲ್ಲಿ ಸಿಬ್ಬಂದಿಗಳು ಕಡ್ಡಾಯವಾಗಿ ಮದ್ಯಸೇವನೆ ತಪಾಸಣೆಗೆ ಒಳಗಾಗಬೇಕಿದೆ. ವಿಮಾನಯಾನ ಆರಂಭವಾಗುವ ಮೊದಲು ನಡೆಸಿದ ತಪಾಸಣೆಯಲ್ಲಿ ಧನಾತ್ಮಕ ಫಲಿತಾಂಶ ಕಂಡುಬಂದರೆ ಅಥವಾ ತಪಾಸಣೆಗೆ ಒಳಗಾಗಲು ನಿರಾಕರಿಸಿದರೆ ಅಂತಹ ಸಿಬ್ಬಂದಿಗಳನ್ನು ವಿಮಾನಯಾನ ಕರ್ತವ್ಯದಿಂದ ನಾಲ್ಕು ವಾರ ಹಿಂಪಡೆಯಲಾಗುವುದು ಮತ್ತು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News