×
Ad

ದೇಶದ ನೂತನ ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಆಯ್ಕೆ

Update: 2017-08-05 19:11 IST

ಹೊಸದಿಲ್ಲಿ, ಆ.5; ದೇಶದ ನೂತನ ಉಪರಾಷ್ಟ್ರಪತಿಯಾಗಿ ಎನ್ ಡಿಎ ಅಭ್ಯರ್ಥಿ ವೆಂಕಯ್ಯ ನಾಯ್ಡು ಆಯ್ಕೆಯಾಗಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆಯ ಮತಎಣಿಕೆ ಮುಕ್ತಾಯವಾಗಿದ್ದು, ಎನ್ ಡಿಎ ಅಭ್ಯರ್ಥಿ ವೆಂಕಯ್ಯ ನಾಯ್ಡು ಶೇ.68 ಮತಗಳನ್ನು ಪಡೆಯುವ ಮೂಲಕ ದೇಶದ ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. 

ಗೋಪಾಲ ಕೃಷ್ಣ ಗಾಂಧಿಯವರು 244 (ಶೇ.32)  ಮತಗಳನ್ನು ಗಳಿಸಿದರೆ, ವೆಂಕಯ್ಯ ನಾಯ್ಡು 516 ಮತಗಳನ್ನು ಗಳಿಸುವ ಮೂಲಕ ಭಾರೀ ಬಹುಮತ ಗಳಿಸಿದ್ದಾರೆ. 771 ಮತಗಳು ಚಲಾವಣೆಯಾಗಿದ್ದು, 760 ಮತಗಳನ್ನು ಮಾನ್ಯವೆಂದು ಪರಿಗಣಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News