ಈ ಬಾರಿಯ ರಕ್ಷಾ ಬಂಧನಕ್ಕೆ ಈ ಅಂಗಡಿಯಲ್ಲಿದೆ ವಿಶೇಷ 'ದುಬಾರಿ' ಉಡುಗೊರೆ
Update: 2017-08-05 20:12 IST
ಹೊಸದಿಲ್ಲಿ, ಆ.5: ಹಬ್ಬಗಳ ಸಂದರ್ಭ ನಮ್ಮ ಪ್ರೀತಿಪಾತ್ರರಿಗೆ ಚಾಕೊಲೇಟ್ ಗಳು, ಗ್ರೀಟಿಂಗ್ ಕಾರ್ಡ್ ಗಳು, ಬಟ್ಟೆಗಳು ಅಥವಾ ಇತರ ದುಬಾರಿ ವಸ್ತುಗಳನ್ನು ಸಾಮಾನ್ಯವಾಗಿ ಆಯ್ಕೆ ಮಾಡಲಾಗುತ್ತದೆ. ಆದರೆ ಈ ಬಾರಿಯ ರಕ್ಷಾ ಬಂಧನಕ್ಕೆ ಕಾನ್ಪುರದ ಅಂಗಡಿ ಮಾಲಕರೊಬ್ಬರು ಗ್ರಾಹಕರಿಗಾಗಿ ವಿಶೇಷ ಗಿಫ್ಟ್ ಗಳನ್ನು ತಯಾರು ಮಾಡಿಟ್ಟುಕೊಂಡಿದ್ದಾರೆ. ಅದು ಚಾಕೊಲೆಟ್ ಗಳೋ, ಬೆಲೆಬಾಳುವ ವಾಚ್ ಗಳೋ ಅಲ್ಲ, ಬದಲಾಗಿ, ಸದ್ಯದ ಪರಿಸ್ಥಿತಿಯಲ್ಲಿ ದುಬಾರಿಯಾಗಿರುವ ತರಕಾರಿಗಳು.
ಇತ್ತೀಚಿನ ದಿನಗಳಲ್ಲಿ ತರಕಾರಿಗಳ ಬೆಲೆ ಗಗನಕ್ಕೇರುತ್ತಿದ್ದಂತೆ ಕಾನ್ಪುರದ ವ್ಯಾಪಾರಿ ಗ್ರಾಹಕರನ್ನು ಸೆಳೆಯಲು ಹೊಸ ತಂತ್ರವನ್ನು ಕಂಡುಕೊಂಡಿದ್ದಾರೆ. ಈ ಬಾರಿಯ ರಾಖಿಗೆ ‘ತರಕಾರಿ ಗಿಫ್ಟ್’ಗಳನ್ನು ಅವರು ಮಾರಲಿದ್ದಾರೆ. ಇವರ ಈ ವಿನೂತನ ಐಡಿಯಾಗೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಪ್ರತಿವರ್ಷ ಮಾಮೂಲಿ ಆಯ್ಕೆ ನೀಡಿ ಬೇಸತ್ತಿರುವವರಿಗೆ ಕಾನ್ಪುರದ ಈ ಅಂಗಡಿಯಲ್ಲಿ ಮಾರಲಾಗುವ ಉಡುಗೊರೆ ವಿಶೇಷವೇ ಸರಿ.