ಮೆದುಳು ಜ್ವರದಿಂದ ಬಳಲುತ್ತಿದ್ದ ಮಗುವಿಗೆ ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆ!
Update: 2017-08-06 13:53 IST
ಹೊಸದಿಲ್ಲಿ,ಆ.6: ಮೆದುಳು ಜ್ವರದಿಂದಬಳಲುತ್ತಿದ್ದ ಐದು ತಿಂಗಳ ಮಗುವಿಗೆ ಚಿಕಿತ್ಸೆ ನೀಡಲು ದಿಲ್ಲಿಯ ಆಸ್ಪತ್ರೆಯೊಂದು ನಿರಾಕರಿಸಿದೆ. ಗೀತಾ ಕಾಲನಿಯ ಚಾಚಾ ನೆಹರೂ ಆಸ್ಪತ್ರೆಯಲ್ಲಿ ಶನಿವಾರ ಘಟನೆ ನಡೆದಿದೆ. ಹಾಸಿಗೆ ಖಾಲಿಯಿಲ್ಲವೆಂದು ಹೇಳಿ ಮಗುವಿಗೆ ಚಿಕಿತ್ಸೆ ನಿರಾಕರಿಸಲಾಗಿದೆ.
ಮಗು ನಾಲ್ಕು ಗಂಟೆ ಕಾಲ ಚಿಕಿತ್ಸೆಯಿಲ್ಲದೆ ಬಳಲಿದ್ದು, ಉನ್ನತ ಮಟ್ಟದ ಶಿಫಾರಿಸಿನ ಬಳಿಕ ಮಗುವನ್ನುಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ಆಸ್ಪತ್ರೆಯ ಅಧಿಕಾರಿಗಳು ಸಮ್ಮತಿಸಿದರೆಂದು ವರದಿಯಾಗಿದೆ.