ಒಂದು ವಾರ ಯಾರೊಂದಿಗೂ ಬೆರೆಯದೆ ಚಿಕಿತ್ಸೆ ಪಡೆಯಿರಿ: ಆಮಿರ್ ಖಾನ್, ಪತ್ನಿ ಕಿರಣ್ ಗೆ ವೈದ್ಯರ ಸೂಚನೆ

Update: 2017-08-06 16:41 GMT

ಹೊಸದಿಲ್ಲಿ, ಆ.6: ಬಾಲಿವುಡ್ ನ ಪ್ರಸಿದ್ಧ ನಟ ಆಮಿರ್ ಖಾನ್ ಹಾಗೂ ಅವರ ಪತ್ನಿ ಕಿರಣ್ ರಾವ್ ಇನ್ನು ಮುಂದೆ ಒಂದು ವಾರಗಳ ಕಾಲ ಕೋಣೆಯೊಳಗೆ ಇರಬೇಕಾಗಿದ್ದು, ಯಾರನ್ನೂ ಸಂಪರ್ಕಿಸುವಂತಿಲ್ಲ. ಇದ್ಯಾವುದೋ ರಿಯಾಲಿಟಿ ಶೋ ಟಾಸ್ಕ್ ಅಥವಾ ಸಿನೆಮಾ ಪ್ರಮೋಶನ್ ಗಾಗಿ ಮಾಡಿರುವ ಗಿಮಿಕ್ ಅಲ್ಲ. ಬದಲಾಗಿ, ಈ ಇಬ್ಬರೂ ಕೋಣೆಯಲ್ಲಿರಬೇಕಾಗಿರುವುದು ಎಚ್ 1  ಎನ್ 1ನಿಂದ.

ಪಾನಿ ಫೌಂಡೇಶನ್ ನ ಸತ್ಯಮೇವ ಜಯತೆ ವಾಟರ್ ಕಪ್ ಅವಾರ್ಡ್ ನಲ್ಲಿ  ಈ ಬಗ್ಗೆ ವಿಡಿಯೋ ಮೂಲಕ ಮಾತನಾಡಿರುವ ಆಮಿರ್, "ನಾನು ಹಾಗೂ ಕಿರಣ್ ಎಚ್ 1 ಎನ್ 1 ಪೀಡಿತರಾಗಿರುವುದರಿಂದ ಕಾರ್ಯಕ್ರಮಕ್ಕೆ ಬರಲಾಗುತ್ತಿಲ್ಲ. 7 ದಿನಗಳ ಕಾಲ ನಾವು ಕೋಣೆಯೊಳಗೆ ಇರಬೇಕೆಂದು ಹೇಳಲಾಗಿದೆ. ಒಂದು ವರ್ಷಗಳ ಕಠಿಣ ಕ್ರಮದ ನಂತರ ಸಂಭ್ರಮಾಚರಣೆಯ ಸಮಯ ಬಂದಾಗ ಅನಾರೋಗ್ಯ ಕಾಡಿದೆ. ಇದು ಸಾಂಕ್ರಾಮಿಕವಾಗಿರುವ ಕಾರಣ ಒಂದು ವಾರ ಮನೆಯಲ್ಲಿರಬೇಕಾಗಿದೆ” ಎಂದಿದ್ದಾರೆ.

ಆಮಿರ್ ಬದಲಾಗಿ ಕಾರ್ಯಕ್ರಮದಲ್ಲಿ ಶಾರೂಕ್ ಖಾನ್ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News