×
Ad

ವಿಸ್ತಾರ ದಿಂದ `ಫ್ರೀಡಂ ಟು ಫ್ಲೈ' ಸೇಲ್

Update: 2017-08-07 18:12 IST

ಹೊಸದಿಲ್ಲಿ,ಆ.7 :  ನಲ್ವತ್ತೆಂಟು ಗಂಟೆಗಳ ``ಫ್ರೀಡಂ ಟು ಫ್ಲೈ'' ಸೇಲ್ ಒಂದನ್ನು  ವಿಸ್ತಾರ ಏರ್ ಲೈನ್ಸ್ ಸೋಮವಾರ ಘೋಷಿಸಿದೆ. ಇಕಾನಮಿ ಕ್ಲಾಸ್ ನಲ್ಲಿ ಎಲ್ಲಾ ವೆಚ್ಚಗಳು ಸೇರಿ ರೂ .799ಕ್ಕೆ ಆರಂಭಿಕ ಟಿಕೆಟ್ ದರಗಳು ಹಾಗೂ ಪ್ರೀಮಿಯಂ ಇಕಾನಮಿಯಲ್ಲಿ ರೂ. 2,099ರಿಂದ ಆರಂಭಗೊಂಡು  ಟಿಕೆಟ್ ಲಭ್ಯವಿದೆ. ಈ ವಿಸ್ತಾರ ಆಫರ್ ಯೋಜನೆಯಲ್ಲಿ ಟಿಕೆಟ್ ಮುಂಗಡ ಕಾದಿರಿಸುವಿಕೆ ಎರಡು ದಿನಗಳು ಅಂದರೆ ಆಗಸ್ಟ್ 8 ಹಾಗೂ 9ಕ್ಕೆ ಮಾಡಬಹುದು.

ಆಗಸ್ಟ್ 23, 2017 ಹಾಗೂ ಎಪ್ರಿಲ್ 19, 2018 ನಡುವೆ ಪ್ರಯಾಣಕ್ಕೆ ಈ ಆಫರ್ ಲಭ್ಯವಿದೆ. ಪ್ರಯಾಣಿಕರು ಕನಿಷ್ಠ 15 ದಿನ ಮುಂಚಿತವಾಗಿ ಟಿಕೆಟ್ ಕಾದಿರಿಸಬೇಕು, ಪ್ರಯಾಣಿಕರು ಗೋವಾ, ಪೋರ್ಟ್ ಬ್ಲೇರ್ ಲೇಹ್, ಜಮ್ಮು, ಶ್ರೀನಗರ, ಕೊಚ್ಚಿ, ಗುವಹಾಟಿ, ಅಮೃತಸರ್, ಭುವನೇಶ್ವರ್ ಹಾಗೂ ಮೆಟ್ರೋ ನಗರಗಳಾದ ದಿಲ್ಲಿ, ಕೊಲ್ಕತ್ತಾ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿಗೆ ಪ್ರಯಾಣಿಸಬಹುದು. ಅತಿ ಕನಿಷ್ಠ ದರ  ಶ್ರೀನಗರ-ಜಮ್ಮು  ಮಾರ್ಗದ ಪ್ರಯಾಣಕ್ಕೆ ಅನ್ವಯಿಸುವುದು. ದಿಲ್ಲಿ-ಅಮೃತಸರ್  ನಡುವಣ ಪ್ರಯಾಣಕ್ಕೆ ರೂ. 1199 ಆಗಿದ್ದರೆ, ದಿಲ್ಲಿ-ಚಂಡೀಗಢ ಮಧ್ಯೆ ಪ್ರಯಾಣಕ್ಕೆ ರೂ. 1,299 ದರ ನಿಗದಿ ಪಡಿಸಲಾಗಿದೆ. ಅಂತೆಯೇ ದಿಲ್ಲಿ-ಶ್ರೀನಗರ, ದಿಲ್ಲಿ-ಅಹ್ಮದಾಬಾದ್ (ರೂ. 1,499), ದಿಲ್ಲಿ-ಮುಂಬೈ, ದಿಲ್ಲಿ-ಪುಣೆ (ರೂ 2,099), ದಿಲ್ಲಿ-ಕೊಲ್ಕತ್ತಾ (ರೂ 2,199) ಮತ್ತು ದಿಲ್ಲಿ ಗೋವಾ ನಡುವಣ ಪ್ರಯಾಣಕ್ಕೆ ರೂ 1,499 ನಿಗದಿ ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News