ದಿಲೀಪ್ ಕುಮಾರ್ ಚೇತರಿಕೆ,ಐಸಿಯುನಲ್ಲಿಯೇ ಮುಂದುವರಿಕೆ

Update: 2017-08-07 13:57 GMT

ಮುಂಬೈ,ಆ.7: ನಿರ್ಜಲೀಕರಣ ಮತ್ತು ಮೂತ್ರಪಿಂಡ ಸಂಬಂಧಿತ ಕಾಯಿಲೆಗಳಿಂದ ಬಾಂದ್ರಾದ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತೀಯ ಚಿತ್ರರಂಗದ ಮೇರುನಟ ದಿಲೀಪ್ ಕುಮಾರ್  ಅವರು ಚೇತರಿಸಿಕೊಳ್ಳುತ್ತಿದ್ದಾರಾದರೂ, ನಿರೀಕ್ಷಣೆಗಾಗಿ ಅವರನ್ನು ಇನ್ನೂ ತುರ್ತು ಚಿಕಿತ್ಸಾ ಘಟಕ(ಐಸಿಯು)ದಲ್ಲಿಯೇ ಇರಿಸಲಾಗಿದೆ ಎಂದು ಆಸ್ಪತ್ರೆಯ ಉಪಾಧ್ಯಕ್ಷ ಅಜಯ ಕುಮಾರ ಪಾಂಡೆ ಅವರು ಸೋಮವಾರ ತಿಳಿಸಿದರು.

ನಿರ್ಜಲೀಕರಣ ಮತ್ತು ಮೂತ್ರನಾಳ ಸೋಂಕಿನಿಂದಾಗಿ ಬಳಲುತ್ತಿದ್ದ 94ರ ಹರೆಯದ ದಿಲೀಪ್ ಅವರನ್ನು ಆ.2ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅವರು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಕ್ರಿಯಾಟಿನಿನ್ ಮಟ್ಟವು ತಗ್ಗಿದೆ. ಅವರಿಗೆ ಕೃತಕ ಉಸಿರಾಟವನ್ನು ಅಳವಡಿಸಲಾಗಿಲ್ಲ. ಅವರ ವಯಸ್ಸಿನ ಹಿನ್ನೆಲೆಯಲ್ಲಿ ನಿರೀಕ್ಷಣೆಗಾಗಿ ಐಸಿಯುನಲ್ಲಿರಿಸಲಾಗಿದೆ ಎಂದ ಪಾಂಡೆ, ಇನ್ನೂ ಕೆಲವು ದಿನಗಳ ಕಾಲ ಅವರನ್ನು ಆಸ್ಪತ್ರೆಯಲ್ಲಿ ಇಟ್ಟುಕೊಳ್ಳಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News