ಕಾಕೋರಿ ರೈಲಿನಲ್ಲಿನ ಸರಕಾರಿ ಖಜಾನೆ ದರೋಡೆ

Update: 2017-08-09 08:14 GMT
ರಾಮ್ ಪ್ರಸಾದ್ ಬಿಸ್ಮಿಲ್ಲಾ ಮತ್ತು ಅಶ್ಫಾಕುಲ್ಲಾ ಖಾನ್‌

►1925, ಆ.9ರಂದು ಭಾರತೀಯ ಸ್ವಾತಂತ್ರ ಚಳವಳಿಯ ಭಾಗವಾಗಿ ಹಿಂದೂಸ್ಥಾನ್ ಸೋಷಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ (ಎಚ್‌ಎಸ್‌ಆರ್‌ಎ) ಸದಸ್ಯರು ಲಕ್ನೋನಿಂದ 22 ಕಿ.ಮೀ ದೂರದ ಕಾಕೋರಿ ಎಂಬಲ್ಲಿ ರೈಲಿನಲ್ಲಿದ್ದ ಸರಕಾರಿ ಖಜಾನೆಯನ್ನು ಲೂಟಿ ಮಾಡಿದರು. ರಾಮ್ ಪ್ರಸಾದ್ ಬಿಸ್ಮಿಲ್ಲಾ ಹಾಗೂ ಅಶ್ಫಾಕುಲ್ಲಾ ಖಾನ್‌ರ ನೇತೃತ್ವದಲ್ಲಿ ನಡೆದ ಈ ದರೋಡೆಯಲ್ಲಿ ಚಂದ್ರಶೇಖರ್ ಆಝಾದ್, ಕೇಶವ ಚಕ್ರವರ್ತಿ, ಸಚಿಂದ್ರ ಬಕ್ಷಿ, ಮುರಳಿ ಶರ್ಮಾ, ಬನ್ವರಿಲಾಲ್ ಮುಂತಾದ ಕ್ರಾಂತಿಕಾರಿಗಳು ಪಾಲ್ಗೊಂಡಿದ್ದರು. ಸಂಘಟನೆಗೆ ಉಂಟಾದ ಹಣದ ಕೊರತೆಯನ್ನು ನೀಗಿಸಲು ಈ ಕಾರ್ಯವನ್ನು ಚಳವಳಿಗಾರರು ಕೈಗೊಂಡರು.

► 1683ರ ಈ ದಿನ ಬ್ರಿಟಿಷ್ ರಾಜ್ಯಾಡಳಿತವು ಏಶ್ಯಾದಲ್ಲಿ ಶಾಂತಿ ಅಥವಾ ಯುದ್ಧವನ್ನು ಘೋಷಿಸುವ ಸಂಪೂರ್ಣ ಅಧಿಕಾರವನ್ನು ಈಸ್ಟ್ ಇಂಡಿಯಾ ಕಂಪೆನಿಗೆ ನೀಡಿತು.

►1898ರಲ್ಲಿ ಜರ್ಮನಿಯ ರುಡಾಲ್ಫ್ ಡೀಸೆಲ್ ಎಂಬವರು ತಾವು ಕಂಡು ಹಿಡಿದ ಡೀಸೆಲ್ ಇಂಜಿನ್‌ನ್ನು ಪೇಟೆಂಟ್‌ಗೆ ಒಳಪಡಿಸಿದರು.

► 1945ರ ಈ ದಿನ ಅಮೆರಿಕವು ‘ಫ್ಯಾಟ್ ಮ್ಯಾನ್’ ಎಂಬ ಅಣು ಬಾಂಬ್‌ನ್ನು ಜಪಾನ್‌ನ ನಾಗಾಸಾಕಿ ಎಂಬ ಪಟ್ಟಣದ ಮೇಲೆ ಹಾಕಿತು.

► 1942ರ ಈ ದಿನ ಭಾರತ ಬಿಟ್ಟು ತೊಲಗಿ ಚಳವಳಿಯ ಭಾಗವಾಗಿ ಮಹಾತ್ಮಾ ಗಾಂಧಿ ಮತ್ತಿತರ 50 ಮುಖಂಡರನ್ನು ಬ್ರಿಟಿಷ್ ಸರಕಾರ ಬಂಧಿಸಿತು.

► 1970ರಲ್ಲಿ ಸ್ವಾತಂತ್ರ ಹೋರಾಟಗಾರ ತ್ರೈಲೋಕ್ಯನಾಥ ಚಕ್ರವರ್ತಿ ನಿಧನರಾದರು.

► 1971ರ ಈ ದಿನ ಭಾರತ ಮತ್ತು ಸೋವಿಯತ್ ರಶ್ಯಾ 20 ವರ್ಷಗಳ ಅವಧಿಯ ಶಾಂತಿ, ಸಹಕಾರ, ಮಿತೃತ್ವ ಒಪ್ಪಂದಕ್ಕೆ ಸಹಿ ಹಾಕಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News