ರಿಯಾಲಿಟಿ ಶೋ ಆಯ್ತು, ಇನ್ನು ಮುಂದೆ ಸಿನೆಮಾದಲ್ಲೂ ಹೆಜ್ಜೆ ಹಾಕಲಿದ್ದಾರೆ ಬಾಬಾ ರಾಮ್ ದೇವ್..!

Update: 2017-08-09 12:31 GMT

ಹೊಸದಿಲ್ಲಿ, ಆ.9: ಹಾಡುಗಾರಿಕೆ ಸ್ಪರ್ಧೆಯ ರಿಯಾಲಿಟಿ ಶೋ ‘ಓಂ ಶಾಂತಿ ಓಂ’ ನಲ್ಲಿ ತೀರ್ಪುಗಾರರಾಗಿ ಯೋಗಗುರು ಬಾಬಾ ರಾಮ್ ದೇವ್ ಪಾಲ್ಗೊಳ್ಳಲಿದ್ದಾರೆ ಎನ್ನುವ ಸುದ್ದಿಯ ನಡುವೆಯೇ ರಾಮ್ ದೇವ್ ಚಿತ್ರವೊಂದರಲ್ಲೂ ನಟಿಸಲಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ.

ಲೋಮ್ ಹರ್ಷ್ ನಿರ್ದೇಶನದ ‘ಯೇ ಹೇ ಇಂಡಿಯಾ’ ಚಿತ್ರದ ಹಾಡೊಂದರಲ್ಲಿ ಅವರು ಹೆಜ್ಜೆಹಾಕಲಿದ್ದಾರೆ ಎಂದು ಐಎಎನ್ ಎಸ್ ವರದಿ ಮಾಡಿದೆ. ಯೇ ಹೇ ಇಂಡಿಯಾದ ನಿರ್ದೇಶಕರ ಜೊತೆ ಪ್ರೊಮೋಶನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬಾಬಾ ರಾಮ್ ದೇವ್, “ಮಿಲಿಯನ್ ಗಳಷ್ಟು ಜನಸಂಖ್ಯೆಯಿರುವ ದೇಶದ ಬಗ್ಗೆ, ವೇದಗಳು ಪತ್ತೆಯಾದ ದೇಶದ ಬಗ್ಗೆ ವಿಶ್ವಾದ್ಯಂತ ಕೆಲಜನರಲ್ಲಿ ತಪ್ಪು ಅಭಿಪ್ರಾಯಗಳಿವೆ. ಭಾರತವು ಹಾವುಗಳ ದೇಶವಲ್ಲ. ಅದು ಮುಂದುವರಿದಿದೆ” ಎಂದಿದ್ದಾರೆ.

“ಇಡೀ ವಿಶ್ವವನ್ನೇ ಮುನ್ನಡೆಸುವ ಸಾಮರ್ಥ್ಯ ಭಾರತಕ್ಕಿದೆ. ಈ ಚಿತ್ರಣವನ್ನು ಯೇ ಹೇ ಇಂಡಿಯಾ ಚಿತ್ರದಲ್ಲಿ ತೋರಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಚಿಂತನೆ ನಡೆಸಿ ಈ ಚಿತ್ರವನ್ನು ಬೆಂಬಲಿಸಲು ನಿರ್ಧರಿಸಿದೆ. ಭಾರತದ ಎಲ್ಲಾ ಪ್ರಜೆಗಳು ಇಂತಹ ಚಿತ್ರಗಳನ್ನು ಪ್ರೋತ್ಸಾಹಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News