×
Ad

ಮುಸ್ಲಿಂ ಯುವಕನ ವಿವಾಹ ಅನೂರ್ಜಿತ ಪ್ರಕರಣ:ತನಿಖೆಗೆ ಅನುಮತಿ ಕೋರಿ ಎನ್‌ಐಎ ಸುಪ್ರೀಂಗೆ ಮನವಿ

Update: 2017-08-10 23:13 IST

ಹೊಸದಿಲ್ಲಿ, ಆ. 10: ಲವ್ ಜಿಹಾದ್ ಪ್ರಕರಣವೆಂದು ಪರಿಗಣಿಸಿ ಕೇರಳ ಉಚ್ಚ ನ್ಯಾಯಾಲಯ ವಿವಾಹವನ್ನು ಅನೂರ್ಜಿತಗೊಳಿಸಿರುವುದನ್ನು ಪ್ರಶ್ನಿಸಿ ಮುಸ್ಲಿಂ ಯುವಕ ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲು ಅನುಮತಿ ಕೋರಿ ರಾಷ್ಟ್ರೀಯ ತನಿಖಾ ಸಂಸ್ಥೆ ಗುರುವಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ.

   ಲವ್ ಜಿಹಾದ್ ಆರೋಪ ಇರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ನಡೆಸಲು ಆದೇಶ ನೀಡುವಂತೆ ಕೋರಿ ರಾಷ್ಟ್ರೀಯ ತನಿಖಾ ಸಂಸ್ಥೆ ಸಲ್ಲಿಸಿದ ಹೊಸ ಮನವಿಯ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್, ಎ.ಕೆ. ಗೋಯಲ್ ಹಾಗೂ ಡಿ.ವೈ. ಚಂದ್ರಚೂಡ್ ಅವರನ್ನೊಳಗೊಂಡ ಪೀಠ ಕೇರಳ ಮೂಲದ ಶಫೀನ್ ಜಹಾನ್ ಹಾಗೂ ರಾಜ್ಯ ಪೊಲೀಸರಿಗೆ ನೋಟಿಸು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News