ಮೂರನೆ ಟೆಸ್ಟ್: ಧವನ್ ಶತಕ; ಶತಕ ವಂಚಿತ ರಾಹುಲ್

Update: 2017-08-12 08:57 GMT

ಪಲ್ಲೆಕೆಲೆ, ಆ.12: ಇಲ್ಲಿ ಆರಂಭಗೊಂಡ ಶ್ರೀಲಂಕಾ ವಿರುದ್ಧದ ಮೂರನೆ ಹಾಗೂ ಅಂತಿಮ ಟೆಸ್ಟ್ ನ ಮೊದಲ ದಿನವಾಗಿರುವ ಶನಿವಾರ ಭಾರತ ಪರ ಮೊದಲ  ಇನಿಂಗ್ಸ್ ನಲ್ಲಿ ಆರಂಭಿಕ ದಾಂಡಿಗ ಶಿಖರ್ ಧವನ್ ಶತಕ ದಾಖಲಿಸಿದ್ದಾರೆ. ಆದರೆ ಲೋಕೇಶ್ ರಾಹುಲ್ ಶತಕ ವಂಚಿತಗೊಂಡರು.

ರಾಹುಲ್ ಜೊತೆ ಇನಿಂಗ್ಸ್ ಆರಂಭಿಸಿದ ಶಿಖರ್ ಧವನ್ ಅವರು ತನ್ನ 26ನೆ ಟೆಸ್ಟ್ ನಲ್ಲಿ 107 ಎಸೆತಗಳಲ್ಲಿ 15 ಬೌಂಡರಿಗಳ ಸಹಾಯದಿಂದ 6ನೆ ಶತಕ ದಾಖಲಿಸಿದರು. ರಾಹುಲ್ 85 ರನ್ (135ಎ, 8ಬೌ) ಗಳಿಸಿ ಔಟಾದರು. ಇದರೊಂದಿಗೆ ಅವರು 19ನೆ ಟೆಸ್ಟ್ ನಲ್ಲಿ ಶತಕ ವಂಚಿತಗೊಂಡರು. ಆದರೆ ರಾಹುಲ್ ಸತತ 7 ಟೆಸ್ಟ್ ಗಳಲ್ಲಿ ಅರ್ಧಶತಕಗಳನ್ನು ಗಳಿಸಿದ ದಾಖಲೆ ಬರೆದರು.

ಮೊದಲ ವಿಕೆಟ್ ಗೆ ಧವನ್ ಮತ್ತು ರಾಹುಲ್  39.3 ಓವರ್ ಗಳಲ್ಲಿ 188 ರನ್ ಗಳ ಜೊತೆಯಾಟ ನೀಡಿದರು.  ಭಾರತ ಮೊದಲ ಇನಿಂಗ್ಸ್ ನಲ್ಲಿ 46 ಓವರ್ ಗಳ ಮುಕ್ತಾಯಕ್ಕೆ 1 ವಿಕೆಟ್ ನಷ್ಟದಲ್ಲಿ 213 ರನ್ ಗಳಿಸಿದ್ದು, ಧವನ್ 117 ರನ್ ಮತ್ತು ಚೇತೇಶ್ವರ ಪೂಜಾರ 3 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ಟಾಸ್ ಜಯಿಸಿದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News