ಡ್ಯಾನ್ಸಿಂಗ್ ಡ್ಯಾಡ್ ಗೆ ನೋ ಎಂದ ಸಲ್ಮಾನ್

Update: 2017-08-12 12:41 GMT

ಬಾಲಿವುಡ್‌ನ ಖ್ಯಾತ ಕೊರಿಯೊಗ್ರಾಫರ್ ರೆಮೊ ಡಿಸೋಜಾ ನಿರ್ದೇಶನದ ನೂತನ ಚಿತ್ರ ‘ಡ್ಯಾನ್ಸಿಂಗ್ ಡ್ಯಾಡ್’ನಲ್ಲಿ ಬಾಕ್ಸ್ ಆಫೀಸ್ ‘ಸುಲ್ತಾನ್’ ಸಲ್ಮಾನ್ ಖಾನ್ ನಟಿಸಲಿದ್ದಾರೆಂದು ಈ ಮೊದಲು ಸುದ್ದಿಯಾಗಿತ್ತು. ಆದರೆ ಈಗ ಸಲ್ಮಾನ್, ಸದ್ದಿಲ್ಲದೆ ಚಿತ್ರದಿಂದ ಹಿಂದೆ ಸರಿದಿದ್ದಾರೆ. ಚಿತ್ರದ ಕಥಾಪಾತ್ರವು ತನಗೆ ಹೊಂದಿ ಕೊಳ್ಳಲಾರದೆಂಬ ಕಾರಣಕ್ಕಾಗಿ ಅವರು ಹಿಂದೆ ಸರಿದಿದ್ದಾರೆಂಬ ಪಿಸುಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿವೆ.

ತನ್ನ ಮಗಳನ್ನು ಸಂತಸಪಡಿಸಲು ಡ್ಯಾನ್ಸ್ ಕಲಿಯುವ ತಂದೆಯೊಬ್ಬನ ಕಥೆಯನ್ನು ‘ಡಾನ್ಸಿಂಗ್ ಡ್ಯಾಡ್’ ಹೇಳುತ್ತದೆ. ಈ ಚಿತ್ರದಲ್ಲಿ ತಾನು ನಟಿಸಬೇಕಿದ್ದ ಪಾತ್ರವು ತನ್ನ ವಯಸ್ಸಿಗೆ ಸೂಕ್ತವಲ್ಲ. ಇಂತಹ ಪಾತ್ರಗಳಲ್ಲಿ ತನಗಿಂತ ವರುಣ್‌ಧವನ್‌ರಂತಹ ಯುವತಾರೆಯರು ನಟಿಸುವುದು ಚೆಂದ ಎಂಬುದು ಸಲ್ಮಾನ್ ಅವರ ವಾದವಾಗಿದೆ.

ಕಬೀರ್‌ಖಾನ್ ಅಭಿನಯದ ಟ್ಯೂಬ್‌ಲೈಟ್ ಇತ್ತೀಚೆಗೆ ಬಿಡುಗಡೆಗೊಂಡ ಸಲ್ಮಾನ್ ಅಭಿನಯದ ಚಿತ್ರವಾಗಿದೆ. ಭಾರೀ ನಿರೀಕ್ಷೆಯೊಂದಿಗೆ ತೆರೆಕಂಡಿದ್ದ ಟ್ಯೂಬ್‌ಲೈಟ್ ಬಾಕ್ಸ್ ಅಫೀಸ್‌ನಲ್ಲಿ ಮುಗ್ಗರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News