ಚಿರಂಜೀವಿ ಚಿತ್ರದಲ್ಲಿ ಬಿಗ್‌ಬಿ

Update: 2017-08-12 12:43 GMT

ಭಾರತೀಯ ಸಿನೆಮಾರಂಗದ ಸೂಪರ್‌ಸ್ಟಾರ್‌ಗಳಾದ ಅಮಿತಾಭ್ ಬಚ್ಚನ್ ಹಾಗೂ ಚಿರಂಜೀವಿ ಇದೇ ಮೊದಲ ಒಂದೇ ಬೆಳ್ಳಿಪರದೆಯನ್ನು ಹಂಚಿಕೊಳ್ಳಲಿದ್ದಾರೆ. ಹೌದು. ಮೆಗಾಸ್ಟಾರ್ ಚಿರಂಜೀವಿಯವರ 151ನೆ ಚಿತ್ರದಲ್ಲಿ ನಟಿಸಲು ಅಮಿತಾಭ್ ಬಚ್ಚನ್ ಸಮ್ಮತಿಸಿದ್ದಾರೆ. ಈ ಚಿತ್ರಕ್ಕೆ ಸಂಬಂಧಿಸಿ ಬಿಗ್‌ಬಿ ಜೊತೆಗಿನ ಮಾತುಕತೆಗಳು ಪ್ರಗತಿಯಲ್ಲಿರುವುದಾಗಿ ಚಿತ್ರಂತಂಡ ತಿಳಿಸಿದೆ

ಚಿರಂಜೀವಿಯ ಪುನಾರಗಮನದ ಚಿತ್ರವಾದ ಖಿಲಾಡಿ ನಂ.1 ಭರ್ಜರಿ ಹಿಟ್ ಆಗಿತ್ತು. ಇದೀಗ ಅವರು ಆಂಧ್ರದ ಸ್ವಾತಂತ್ರ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಪಾತ್ರದಲ್ಲಿ ನಟಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಚಿತ್ರ ವನ್ನು ಅವರ ಪುತ್ರ ರಾಮ್ ಚರಣ್ ತೇಜಾ ಹೋಂ ಬ್ಯಾನರ್‌ನಲ್ಲಿ ನಿರ್ಮಿಸುತ್ತಿದ್ದಾರೆ. ಸುರೇಂದ್ರ ರೆಡ್ಡಿ ಚಿತ್ರದ ನಿರ್ದೇಶಕ. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ನಾಯಕಿ ಪಾತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್ ನಟಿಸುವ ಬಗ್ಗೆಯೂ ಮಾತುಕತೆಗಳು ನಡೆಯುತ್ತಿವೆಯಂತೆ. ಇಷ್ಟೇ ಅಲ್ಲದೆ ಕನ್ನಡದ ಕಿಚ್ಚ ಸುದೀಪ್ ಕೂಡಾ ಈ ಚಿತ್ರದಲ್ಲಿ ನಟಿಸಲಿದ್ದಾರೆಂಬ ಮಾತುಗಳೂ ಕೇಳಿಬರುತ್ತಿವೆ. ದಕ್ಷಿಣ ಭಾರತದ ಜನಪ್ರಿಯ ನಟಿ ನಯನತಾರಾ ಕೂಡಾ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News