ಸಿಂಗಂ 3ಗೆ ಸನ್ನಿಡಿಯೋಲ್ ಹೀರೋ

Update: 2017-08-12 12:50 GMT

ತಮಿಳಿನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ‘ಸಿಂಗಂ’ ಬಾಲಿವುಡ್‌ಗೆ ರಿಮೇಕ್ ಆಗಿ ಬಾಕ್ಸ್‌ಆಫೀಸ್‌ನಲ್ಲಿ ಜಯಭೇರಿ ಬಾರಿಸಿದ್ದು ಈಗ ಇತಿಹಾಸ. ಬಾಲಿವುಡ್ ‘ಸಿಂಗಂ’ನ ನಾಯಕ ಅಜಯ್ ದೇವಗನ್, ಇನ್‌ಸ್ಪೆೆಕ್ಟರ್ ಬಾಜಿರಾವ್ ಸಿಂಗಂ ಪಾತ್ರದಲ್ಲಿ ನೀಡಿದ ಪವರ್‌ಫುಲ್ ಅಭಿನಯ ಚಿತ್ರಪ್ರೇಮಿಗಳನ್ನು ರೋಮಾಂಚನಗೊಳಿಸಿತ್ತು. ಇದೀಗ ಮೂಲ ತಮಿಳು ಚಿತ್ರದ ಮುಂದುವರಿದ ಭಾಗ ‘ಸಿಂಗಂ 3’ ಕೂಡಾ ಬಾಲಿವುಡ್‌ಗೆ ರಿಮೇಕ್ ಆಗಲಿರುವುದು ಖಚಿತವಾಗಿದೆ. ಆದರೆ ಆ ಚಿತ್ರದಲ್ಲಿ ಅಜಯ್ ದೇವಗನ್ ನಟಿಸುವುದಿಲ್ಲ. ಅವರ ಬದಲಿಗೆ ಸನ್ನಿಡಿಯೋಲ್ ಚಿತ್ರದ ನಾಯಕನಾಗಿ ಆಯ್ಕೆಯಾಗಿದ್ದು, ಖಾಕಿ ತೊಟ್ಟು ಮಿಂಚಲಿದ್ದಾರೆ. ‘ಸಿಂಗಂ 3’ ಬಾಲಿವುಡ್ ರಿಮೇಕ್‌ನಲ್ಲಿ ಉದಯೋನ್ಮುಖ ನಟ ಅನೂಪ್‌ಸಿಂಗ್ ವಿಲನ್ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಆದಾಗ್ಯೂ ಹೀರೋಯಿನ್ ಆಯ್ಕೆ ಇನ್ನಷ್ಟೇ ಆಗಬೇಕಿದೆ.

 ‘ಗಜನಿ’, ‘ಮೈ ನೇಮ್ ಇಸ್ ಖಾನ್’ ಹಾಗೂ ‘ಓಕೆ ಜಾನು’ ಚಿತ್ರಗಳಿಗೆ ಛಾಯಾಗ್ರಾಹಕರಾಗಿದ್ದ ರವಿ ಕೆ. ಚಂದ್ರನ್, ‘ಸಿಂಗಂ 3’ ನ ಬಾಲಿವುಡ್ ರಿಮೇಕ್ ನ್ನು ನಿರ್ದೇಶಿಸಲಿದ್ದಾರೆ. ವಿಶೇಷವೆಂದರೆ ಕಳೆದ ಕೆಲವು ವರ್ಷ ಗಳಿಂದ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಸನ್ನಿ ಈ ವರ್ಷ ಬಿಡುವಿಲ್ಲದ ತಾರೆಯೆನಿಸಿಕೊಂಡಿದ್ದಾರೆ.

ಸದ್ಯ ಸನ್ನಿ ದೇವಲ್ ಬಿಡುಗಡೆಗೆ ಸಿದ್ಧವಾಗಿರುವ ತನ್ನ ಚಿತ್ರ ‘ಪೋಸ್ಟರ್ ಬಾಯ್’್ಸನ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಸನ್ನಿ, ತನ್ನ ಸಹೋದರ ಬಾಬಿ ಡಿಯೋಲ್ ಜೊತೆ ನಟಿಸುತ್ತಿದ್ದಾರೆ. ಅಂದಹಾಗೆ ಪೋಸ್ಟರ್‌ಬಾಯ್ಸಾ ಶ್ರೇಯಸ್ ತಲ್ಪಡೆ ನಿರ್ದೇಶನದ ಮರಾಠಿ ಚಿತ್ರದ ರಿಮೇಕ್ ಆಗಿದೆ. ಇದಲ್ಲದೆ ಸನ್ನಿಡಿಯೋಲ್ ತನ್ನ ಪುತ್ರನ ಅಭಿಯನದ ಚೊಚ್ಚಲ ಚಿತ್ರ ‘ಪಲ್ ಪಲ್ ದಿಲ್ ಕೆ ಪಾಸ್’ ಚಿತ್ರದ ಬಗ್ಗೆಯೂ ಕಾಳಜಿ ವಹಿಸುತ್ತಿದ್ದಾರೆ. ಜೊತೆಗೆ ಬಾಕ್ಸ್ ಆಫೀಸ್‌ನಲ್ಲಿ ಜಯಭೇರಿ ಬಾರಿಸಿದ ‘ಯಮ್ಲಾ ಪಗ್ಲಾ ದಿವಾನಾ’ದ ಮುಂದುವರಿದ ಭಾಗದಲ್ಲೂ ಸನ್ನಿಡಿಯೋಲ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಾಬಿ ಡಿಯೋಲ್ ಹಾಗೂ ಕಾಜಲ್ ಅಗರ್‌ವಾಲ್ ಕೂಡಾ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News