ಮುಂದಿನ ವರ್ಷ ದೀಪಿಕಾ- ಅನುಷ್ಕಾ ಬಾಕ್ಸ್ಆಫೀಸ್ ಸಮರ

Update: 2017-08-12 12:59 GMT

ಬಾಲಿವುಡ್‌ನ ಟಾಪ್ ಹೀರೋಯಿನ್‌ಗಳಾದ ದೀಪಿಕಾ ಪಡುಕೋಣೆ ಹಾಗೂ ಅನುಷ್ಕಾ ಶರ್ಮಾ ಅವರ ನಡುವೆ ಬಾಕ್ಸ್ ಆಫೀಸ್ ಸಮರಕ್ಕೆ 2018ನೆ ಇಸವಿಯು ಸಾಕ್ಷಿಯಾಗಲಿದೆ. ಹೌದು, ಈ ಇಬ್ಬರು ಜನಪ್ರಿಯ ನಟಿಯರು ನಾಯಕಿಯರಾಗಿ ನಟಿಸಿರುವ ಎರಡು ಚಿತ್ರಗಳು ಮುಂದಿನ ವರ್ಷದ ಸೆಪ್ಟಂಬರ್ 28ರಂದು ಒಟ್ಟೊಟ್ಟಾಗಿ ರಿಲೀಸ್ ಆಗಲಿವೆ. ಅನುಷ್ಕಾ ಶರ್ಮಾ ನಾಯಕಿಯಾಗಿರುವ ‘ಸುಯಿ ಧಗಾ’ ಹಾಗೂ ದೀಪಿಕಾ ಅಭಿನಯದ ಲೇಡಿ ಗ್ಯಾಂಗ್‌ಸ್ಟರ್ ಸಪ್ನಾ ದೀದಿಯ ಜೀವನ ಕಥೆಯನ್ನು ಆಧರಿಸಿದ ಚಿತ್ರ ಜೊತೆಯಾಗಿ ತೆರೆಕಾಣಲಿವೆ. ವಿಶಾಲ್ ಭಾರದ್ವಾಜ್ ನಿರ್ದೇಶನದ ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಇರ್ಫಾನ್ ಖಾನ್ ಮುಖ್ಯ ಪಾತ್ರದಲ್ಲಿದ್ದಾರೆ.

ಆದರೆ ಈ ಎರಡೂ ಚಿತ್ರಗಳು ಜೊತೆಯಾಗಿ ಬಿಡುಗಡೆಗೊಳ್ಳಲು ಕಾರಣವೂ ಇದೆ. ಸೆಪ್ಟಂಬರ್ 28ರಂದು ಶುಕ್ರವಾರ ಚಿತ್ರ ಬಿಡುಗಡೆ ಗೊಂಡಲ್ಲಿ ಗಾಂಧಿ ಜಯಂತಿ ದಿನವಾದ ಅಕ್ಟೋಬರ್ 2ರವರೆಗೆ ಸಾಲುಸಾಲಾಗಿ ರಜೆಗಳು ಬರುವುದರಿಂದ ಚಿತ್ರದ ಗಳಿಕೆ ಚೆನ್ನಾಗಿರುವುದೆಂಬ ದೂರದೃಷ್ಟಿಯೇ ಈ ಎರಡೂ ಚಿತ್ರಗಳು ಆ ದಿನವೇ ಬಿಡುಗಡೆಯಾಗಲು ಕಾರಣವಂತೆ.

ಈ ಎರಡೂ ಚಿತ್ರಗಳು ನಾಯಕಿ ಪ್ರಧಾನ ಕಥಾವಸ್ತುವನ್ನು ಹೊಂದಿರು ವುದರಿಂದ ಅನುಷ್ಕಾ ಹಾಗೂ ದೀಪಿಕಾಗೆ ಇದು ಪ್ರತಿಷ್ಠೆಯ ಪ್ರಶ್ನೆಯೂ ಹೌದು.ಒಟ್ಟಿನಲ್ಲಿ ಈ ತಾರಾ ಸಮರದಲ್ಲಿ ಯಾವ ನಾಯಕಿ ಗೆಲ್ಲುತ್ತಾರೆ ಎಂಬುದನ್ನು ಬಾಲಿವುಡ್ ಕುತೂಹಲದಿಂದ ನಿರೀಕ್ಷಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News