ಒಳ್ಳೆಯ ಉದ್ದೇಶವು ಉತ್ತಮ ಆರಂಭ: ಜೋಷಿ

Update: 2017-08-12 14:39 GMT

ಹೊಸದಿಲ್ಲಿ,ಆ.12: ತನ್ನ ಹೊಣೆಗಾರಿಕೆಗಳನ್ನು ರಚನಾತ್ಮಕವಾಗಿ ನಿರ್ವಹಿಸುವ ಮತ್ತು ಧನಾತ್ಮಕ ಬದಲಾವಣೆಗಳನ್ನು ತರುವ ಆಶಯವನ್ನು ಕೇಂದ್ರ ಸೆನ್ಸಾರ್ ಮಂಡಳಿಯ ನೂತನ ಅಧ್ಯಕ್ಷ ಪ್ರಸೂನ್ ಜೋಷಿ ಅವರು ಹೊಂದಿದ್ದಾರೆ.

ಶನಿವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಒಳ್ಳೆಯ ಉದ್ದೇಶವು ಉತ್ತಮ ಆರಂಭವಾಗಿರುತ್ತದೆ. ಜವಾಬ್ದಾರಿಯನ್ನು ಅರಿತುಕೊಂಡು ಅತ್ಯುತ್ತಮವಾಗಿ ಕಾರ್ಯ ನಿರ್ವಹಣೆ ತನ್ನ ಪ್ರಯತ್ನವಾಗಲಿದೆ ಎಂದರು.

ಗೀತ ರಚನೆಕಾರ ಜೋಷಿ(45) ಅವರ ಅಧಿಕಾರಾವಧಿಯು ಮೂರು ವರ್ಷ ಅಥವಾ ಮುಂದಿನ ಆದೇಶದವರೆಗೆ ಇರುತ್ತದೆ.

ಸರಕಾರವು ಸೆನ್ಸಾರ್ ಮಂಡಳಿಯನ್ನೂ ಪುನರ್‌ರಚಿಸಿದ್ದು, ವಿದ್ಯಾಬಾಲನ್, ವಿವೇಕ ಅಗ್ನಿಹೋತ್ರಿ, ಗೌತಮ ತಾಡಿಮಲ್ಲಾ, ನರೇಂದ್ರ ಕೊಹ್ಲಿ, ನರೇಶ ಚಂದ್ರ ಲಾಲ್, ನೀಲ್ ಹರ್ಬರ್ಟ್ ನೊಂಗ್‌ಕಿನ್ರಿ, ವಾಮನ ಕೇಂದ್ರೆ, ಟಿ.ಎಸ್ ನಾಗಾಭರಣ, ರಮೇಶ ಪತಂಗೆ, ವಾನಿ ತ್ರಿಪಾಠಿ ಟಿಕೂ, ಜೀವಿತಾ ರಾಜಶೇಖರ ಮತ್ತು ಮಿಹಿರ ಭುತಾ ಅವರು ನೂತನ ಸದಸ್ಯರಾಗಿದ್ದಾರೆ.

ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಗೀತ ರಚನೆಕಾರರಾಗಿರುವ ಜೋಷಿ ಉತ್ತರಾಖಂಡದ ಅಲ್ಮೋರಾದಲ್ಲಿ ಜನಿಸಿದ್ದು, 2015ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿ ದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News