ಗೋರಖ್ ಪುರ ದುರಂತ: ಹಲವು ಮಕ್ಕಳ ಪ್ರಾಣ ಉಳಿಸಿದ್ದ ಡಾ.ಕಫೀಲ್ ಖಾನ್ ರನ್ನು ‘ಬಲಿಪಶು’ ಮಾಡಲಾಗಿದೆ

Update: 2017-08-14 10:19 GMT

ಗೋರಖ್ ಪುರ, ಆ.14: ಆಕ್ಸಿಜನ್ ಸ್ಥಗಿತಗೊಂಡ ಕಾರಣ ಗೋರಖ್ ಪುರ ಆಸ್ಪತ್ರೆಯಲ್ಲಿ 79 ಮಕ್ಕಳು ಮೃತಪಟ್ಟ ಘಟನೆಯಲ್ಲಿ ಡಾ.ಕಫೀಲ್ ಖಾನ್ ಅವರನ್ನು ‘ಬಲಿಪಶು’ ಮಾಡಲಾಗಿದೆ ಎಂದು ದಿಲ್ಲಿಯ ಏಮ್ಸ್ ನ ವೈದ್ಯರು ಆರೋಪಿಸಿದ್ದಾರೆ.

“ವೈದ್ಯರನ್ನು ಪ್ರಕರಣದಲ್ಲಿ ಬಲಿಪಶು ಮಾಡಲಾಗಿದೆ” ಎಂದು ಏಮ್ಸ್ ನ ವೈದ್ಯರಲ್ಲೊಬ್ಬರಾದ ಡಾ.ಹರ್ಜಿತ್ ಸಿಂಗ್ ಹೇಳಿದ್ದಾರೆ. ಡಾ.ಕಫೀಲ್ ಖಾನ್ ರ ವಜಾ ವಿರೋಧಿಸಿ ವೈದ್ಯರ ಅಸೋಸಿಯೇಶನ್ ಪತ್ರವೊಂದನ್ನು ಬರೆದಿದ್ದು, ಸಾರ್ವಜನಿಕ ಆರೋಗ್ಯದ ಬಗ್ಗೆ ರಾಜ್ಯ ಸರಕಾರ ನಿರ್ಲಕ್ಷ್ಯ ತೋರಿದೆ ಎಂದಿದೆ. ರಾಜಕಾರಣಿಗಳು ತಮ್ಮ ಅಸಮರ್ಥತೆಯನ್ನು ಅಡಗಿಸುತ್ತಿದ್ದಾರೆ. ಆಕ್ಸಿಜನ್, ಕೈವಚ, ಸಲಕರಣೆಗಳು ಇಲ್ಲದಿದ್ದರೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದೆ.

ಗೋರಖ್ ಪುರ ಘಟನೆಯ ನಂತರ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಆದಿತ್ಯನಾಥ್ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಆಕ್ಸಿಜನ್ ಸೌಲಭ್ಯ ಸ್ಥಗಿತಗೊಂಡಿದ್ದ ಸಂದರ್ಭ ಬೇರೆ ಬೇರೆ ಆಸ್ಪತ್ರೆಗಳಿಗೆ ತೆರಳಿ ಆಕ್ಸಿಜನ್ ಸಿಲಿಂಡರ್ ಗಳನ್ನು ತಂದು, ಕೊನೆಗೆ ತನ್ನ ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿಸಿ ಆಕ್ಸಿಜನ್ ಸಿಲಿಂಡರ್ ಗಳನ್ನು ತಂದಿದ್ದರು. ಆದರೆ ನಿನ್ನೆ ಅವರನ್ನು ಆಸ್ಪತ್ರೆಯ ಸೇವೆಯಿಂದ ವಜಾಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News