ಪ್ರವಾಹದ ರಭಸಕ್ಕೆ ರಸ್ತೆಗೆ ಬಂದ ಭಾರೀ ಗಾತ್ರದ ಮೀನಿಗಾಗಿ ಕಿತ್ತಾಟ!
Update: 2017-08-14 21:42 IST
ಬಿಹಾರ, ಆ.14: ಅಸ್ಸಾಂ ಸೇರಿದಂತೆ ಇತರ ಭಾಗಗಳು ನೆರೆಹಾವಳಿಯಿಂದ ಕಂಗೆಟ್ಟಿದೆ. ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಇಲ್ಲಿನ ಜನಜೀವನ ಅಸ್ಯವ್ಯಸ್ತವಾಗಿದೆ. ಈ ನಡುವೆ ಪ್ರವಾಹದಿಂದಾಗಿ ರಸ್ತೆಗೆ ಬಂದ ಭಾರೀ ಗಾತ್ರದ ಮೀನನ್ನು ಹಿಡಿಯಲು ಜನರು ಕಿತ್ತಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರವಾಹದ ರಭಸಕ್ಕೆ ಈ ಮೀನು ರಸ್ತೆಗೆ ತಲುಪಿದೆ. ಈ ಸಂದರ್ಭ ಅಲ್ಲಿ ಸೇರಿದ್ದ ಜನರು ಮೀನಿಗಾಗಿ ಮುಗಿಬಿದ್ದಿದ್ದಾರೆ. ಕೊನೆಗೆ ಇಬ್ಬರು ಆ ಮೀನನ್ನು ಹೊತ್ತುಕೊಂಡು ಹೋಗುತ್ತಾರೆ. ಪತ್ರಕರ್ತರೊಬ್ಬರು ಮಾಡಿರುವ ಈ ಘಟನೆಯ ವಿಡಿಯೋ ವೈರಲ್ ಆಗಿದೆ