ಭಾರತದಲ್ಲಿ ಪ್ರಪ್ರಥಮ ಉಡಾವಣೆಗೆ ರಾಕೆಟ್ ಸಾಗಿಸಿದ್ದು ಈ ವಾಹನದಲ್ಲಿ!

Update: 2017-08-15 12:17 GMT

ದೇಶದ ಪ್ರಪ್ರಥಮ ರಾಕೆಟ್ ಉಡಾಯಿಸಿದ್ದರ ಹಿಂದೆ ರೋಚಕ ಕಥೆಗಳಿವೆ. ಇಂದು ಭಾರತದ ಖ್ಯಾತ ಉಡಾವಣಾ ಕೇಂದ್ರ ಎನಿಸಿದ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ 1963ರಲ್ಲಿ ಮೊದಲ ರಾಕೆಟ್ ಉಡಾವಣೆಗೊಳ್ಳುವ ಸಂದರ್ಭದಲ್ಲಿ ಕ್ಯಾಥೋಲಿಕ್ ಚರ್ಚ್ ಆಗಿತ್ತು. 1960ರ ದಶಕದಲ್ಲಿ ಡಾ.ವಿಕ್ರಂ ಸಾರಾಬಾಯ್ ಅವರು, ತಿರುವನಂತಪುರ ಬಳಿಕ ಮೀನುಗಾರಿಕಾ ಗ್ರಾಮವಾದ ತುಂಬಾವನ್ನು ರಾಕೆಟ್ ಉಡಾವಣೆಗೆ ಸೂಕ್ತ ಸ್ಥಳ ಎಂದು ಆಯ್ಕೆ ಮಾಡಿಕೊಂಡರು. ಆ ಜಾಗದಲ್ಲಿ ಸಂಭಾವ್ಯ ಪ್ರದೇಶ ಎಂದು ಅವರು ಆಯ್ಕೆ ಮಾಡಿದ್ದು ಚರ್ಚ್ ಆವರಣವನ್ನು. ಹಾಗಾಗಿ ಭಾರತದ ಪ್ರಥಮ ರಾಕೆಟನ್ನು ಉಡಾಯಿಸಿದ್ದು ಚರ್ಚ್‍ನಿಂದ. ಅದನ್ನು ಸಾಗಿಸಿದ್ದು ಸೈಕಲ್‍ನಲ್ಲಿ!.

ಭೂಮಿಯ ಅಯಸ್ಕಾಂತೀಯ ಸಮಭಾಜಕ ವೃತ್ತ ಪ್ರದೇಶದಲ್ಲಿ ಬರುವ ಸೆಂಟ್ ಮೇರಿ ಮ್ಯಾಗ್ದಲೀನ್ ಚರ್ಚ್ ಸೂಕ್ತ ಜಾಗ ಎಂಬ ತೀರ್ಮಾನಕ್ಕೆ ಬಂದರು. ಒಂದು ದಿನ ಡಾ.ಸಾರಾಭಾಯ್ ಹಾಗೂ ಸಹೋದ್ಯೋಗಿಗಳು ಅಂದಿನ ಬಿಷಪ್ ರೆವರಂಡ್ ಫಾದರ್ ಡಾ.ಪೀಟರ್ ಬರ್ನಾರ್ಡ್ ಪೆರೇರಾ ಅವರ ಜತೆ ಚರ್ಚ್ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಿದರು. ಮಾತುಕತೆ ಫಲಪ್ರದವಾಗದೆ ರವಿವಾರದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸುವಂತೆ ಫಾದರ್ ಸೂಚಿಸಿದರು. ಈ ವಿಜ್ಞಾನಿಗಳ ಗುಂಪಿನಲ್ಲಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರೂ ಇದ್ದರು. ಇದನ್ನು ಅವರು "ಇಗ್ನೈಟೆಡ್ ಮೈಂಡ್ಸ್: ಅನ್‍ಲೀಸಿಂಗ್ ದ ಪವರ್ ವಿದ್ ಇನ್ ಇಂಡಿಯಾ" ದಲ್ಲೂ ದಾಖಲಿಸಿದ್ದಾರೆ. ಅಗತ್ಯ ಅನುಮತಿ ಪಡೆದ ಬಳಿಕ ಚರ್ಚ್ ಅನ್ನು ಸ್ಥಳಾಂತರಿಸಲಾಯಿತು. ಚರ್ಚ್ ಮುಂದಿನ ಉದ್ಯಾನವನ ಮೊಟ್ಟಮೊದಲ ಉಡಾವಣಾ ಸ್ಥಳವಾಯಿತು.

ಮೊಟ್ಟಮೊದಲ ರಾಕೆಟ್ ವಿಜ್ಞಾನದ ಮೊದಲ ಹೆಜ್ಜೆ ಸೈಕಲ್‍ನಲ್ಲಿ ಆರಂಭವಾಯಿತು. ಜತೆಗೆ ಸೈಕಲ್ ಎತ್ತಿನಗಾಡಿ ಕೂಡಾ ಬದಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News