ಗೋರಖ್‌ಪುರ ದುರಂತ: ಯೋಗಿ ಆದಿತ್ಯನಾಥ್, ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲು ಆಪ್ ಆಗ್ರಹ

Update: 2017-08-15 16:35 GMT

ಹೊಸದಿಲ್ಲಿ, ಆ. 15: ಗೋರಖ್‌ಪುರದ ಬಿಆರ್‌ಡಿ ಆಸ್ಪತ್ರೆಯಲ್ಲಿ ಆಮ್ಲಜನಕ ಮಟ್ಟ ಕಡಿಮೆ ಆದ ಹಿನ್ನೆಲೆಯಲ್ಲಿ ಸಂಭವಿಸಿದ ಮಕ್ಕಳ ಸಾವಿನ ದುರಂತಕ್ಕೆ ಸಂಬಂಧಿಸಿ ಉತ್ತರಪ್ರದೇಶದ ಮುಖ್ಯಮಂತ್ರಿ ಹಾಗೂ ಉನ್ನತ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಆಪ್ ಆಗ್ರಹಿಸಿದೆ.

ಗೋರಖ್‌ಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜಿಗೆ ಆಮ್ಲಜನಕ ಪೂರೈಸುವ ಜವಾಬ್ದಾರಿ ವಹಿಸಿಕೊಂಡಿದ್ದ ಸಂಸ್ಥೆ ಎಪ್ರಿಲ್‌ನಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಅವರ ಕಚೇರಿಗೆ ಪತ್ರ ಬರೆದು ಪಾವತಿ ಬಾಕಿ ಇರುವುದಾಗಿ ಮಾಹಿತಿ ನೀಡಿತ್ತು ಎಂದು ಆಪ್ ಪ್ರತಿಪಾದಿಸಿದೆ.

 ಆಮ್ಲಜನಕ ಪೂರೈಕೆ ಸಂಸ್ಥೆಯಾದ ಪುಷ್ಪಾ ಸೇಲ್ಸ್ ಪ್ರೈವೇಟ್ ಲಿಮಿಟೆಡ್ ಕಳುಹಿಸಿದ ಎರಡು ಪತ್ರವನ್ನು ಬಿಡುಗಡೆ ಮಾಡಿರುವ ಆಪ್, ಯೋಗಿ ಆದಿತ್ಯನಾಥ್ ಹಾಗೂ ಉನ್ನತ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದೆ.

 ಆಮ್ಲಜನಕ ಪೂರೈಕೆ ಏಜೆನ್ಸಿ ನಿರ್ದೇಶಕ ಮನೀಶ್ ಭಂಡಾರಿ ಉತ್ತರಪ್ರದೇಶದ ವೈದ್ಯಕೀಯ ಶಿಕ್ಷಣ ಸಚಿವ ಅಶುತೋಷ್ ಟಂಡನ್‌ಗೆ ರವಾನಿಸಿದ ಆಗಸ್ಟ್ 9ರ ಪತ್ರವನ್ನು ಉಲ್ಲೇಖಿಸಿದ ಆಪ್ ನಾಯಕ ಸಂಜಯ್ ಸಿಂಗ್, ಪಾವತಿ ಬಾಕಿ ಇರುವ 67 ಲಕ್ಷ ರೂಪಾಯಿ ಪಾವತಿಸುವಂತೆ ಕೋರಿ ಏಜೆನ್ಸಿ 8ಕ್ಕಿಂತಲೂ ಅಧಿಕ ಬಾರಿ ನೆನಪೋಲೆಗಳನ್ನು ರವಾನಿಸಿತ್ತು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News