ಬ್ಲೂವೇಲ್ ಚಾಲೆಂಜ್ ಗೇಮ್‌ಗೆ ಕೇರಳದಲ್ಲಿ ಮೊದಲ ಬಲಿ ?

Update: 2017-08-15 17:46 GMT

ತಿರುವನಂತಪುರಂ, ಆ. 15: ದೇಶಾದ್ಯಂತ ಭಯಾನಕ ಬ್ಲೂವೇಲ್ ಚಾಲೆಂಜ್ ಗೇಮ್ ಬಗ್ಗೆ ಜಾಗೃತಿ ಮುಂದುವರಿದಿದೆ. ಆದರೆ, ಇದೇ ಹೊತ್ತಲ್ಲೇ ಕೇರಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಬಾಲಕನೊಬ್ಬ ಈ ಗೇಮ್‌ಗೆ ಬಲಿಯಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗುತ್ತಿದೆ.

  ತಿರುವನಂತಪುರದ ಪೆರುಂಕುಳಂನ 11 ತರಗತಿ ವಿದ್ಯಾರ್ಥಿಯಾಗಿರುವ 16 ವಯಸ್ಸಿನ ಮನೋಜ್ ಎಂಬ ಬಾಲಕ ತನ್ನ ಮನೆಯ ಬೆಡ್‌ರೂಂನಲ್ಲಿ ಜುಲೈ 26ರಂದು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ವಿಲಿಪ್ಪಿಲ್‌ಶಾಲಾ ಪೊಲೀಸರು ಈ ಬಗ್ಗೆ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಆದರೆ ಮಂಗಳವಾರ ಮನೋಜ್ ತಾಯಿ ಅನು, ತನ್ನ ಪುತ್ರ ಬ್ಲೂವೇಲ್ ಚಾಲೆಂಜ್ ಗೇಮ್‌ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಇದು ಸಾಬೀತಾದರೆ, ಬ್ಲೂವೇಲ್ ಚಾಲೆಂಜಿಂಗ್ ಗೇಮ್‌ಗೆ ಕೇರಳದ ಮೊದಲ ಬಲಿ ಇದಾಗಲಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗುವ ಈ ಗೇಮ್ ಬಾಲಕರನ್ನು ಆಕರ್ಷಿಸುತ್ತದೆ. ಅವರು ಸ್ವ ಹಾನಿ ಹಾಗೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸುತ್ತದೆ. ಈ ಗೇಮ್ 50 ಸವಾಲುಗಳನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News