ನಿವೃತ್ತ ಉದ್ಯೋಗಿಗಳ ನಿಶ್ಚಲ ಸಹಾಯಕ ಭತ್ತೆ ಹೆಚ್ಚಳ: ಸರಕಾರ

Update: 2017-08-16 15:44 GMT

ಹೊಸದಿಲ್ಲಿ, ಆ.16: ನಿವೃತ್ತ ವಿಕಲಚೇತನ ಉದ್ಯೋಗಿಗಳಿಗೆ ನೀಡಲಾಗುತ್ತಿದ್ದ ನಿಶ್ಚಲ ಸಹಾಯಕ ಭತ್ತೆಯನ್ನು 4,500 ರೂ.ನಿಂದ 6,750 ರೂ.ಗೆ (ತಿಂಗಳಿಗೆ) ಹೆಚ್ಚಿಸಲಾಗಿದೆ ಎಂದು ಸರಕಾರದಆದೇಶದಲ್ಲಿ ತಿಳಿಸಲಾಗಿದೆ.

ಶೇ.100ರಷ್ಟು ಅಂಗವೈಕಲ್ಯ ಹೊಂದಿರುವ ನಿವೃತ್ತ ಉದ್ಯೋಗಿಗಳಿಗೆ ಕನಿಷ್ಟ ಮೂರು ತಿಂಗಳ ಮಟ್ಟಿಗಾದರೂ ಸಹಾಯಕನ ಅಗತ್ಯವಿದೆ ಎಂದು ಅಧಿಕೃತ ವೈದ್ಯಕೀಯ ಪ್ರಾಧಿಕಾರದಿಂದ ಪ್ರಮಾಣಪತ್ರ ಸಲ್ಲಿಸಿದವರಿಗೆ ಈ ಭತ್ತೆ ಮಂಜೂರಾಗುತ್ತದೆ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಈ ಹೆಚ್ಚಳ ಮಾಡಲಾಗಿದೆ . 2017ರ ಜುಲೈ 1ರಿಂದ ಈ ಆದೇಶ ಅನ್ವಯವಾಗುತ್ತದೆ ಎಂದು ಸರಕಾರ ತಿಳಿಸಿದೆ. ಅಂಗವೈಕಲ್ಯ ಪಿಂಚಣಿಯ ಜೊತೆಗೆ ನಿಶ್ಚಲ ಸಹಾಯಕ ಭತ್ತೆಯನ್ನು ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News