×
Ad

ಬ್ಲೂವೇಲ್ ಚಾಲೆಂಜ್ ಶೋಧ: ಕೇರಳ ನೆಟ್ಟಿಗರಿಗೆ ಪ್ರಥಮ ಸ್ಥಾನ

Update: 2017-08-17 21:55 IST

ಕೊಚ್ಚಿ, ಆ. 17: ಸಾಯೋ ಆಟ ಬ್ಲೂವೇಲ್ ಚಾಲೆಂಜ್ ಪಿಡುಗು ಜುಲೈಯಲ್ಲಿ ಭಾರತದಲ್ಲಿ ಕಾಣಿಸಿಕೊಂಡಿತು. ಆದರೆ ಈ ಅಪಾಯಕಾರಿ ಆಟದ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿರುವುದು ಕೇರಳಿಗರು ಎಂಬುದು ಇತ್ತೀಚಿಗೆ ಬೆಳಕಿಗೆ ಬಂದಿದೆ.

ಗೂಗಲ್‌ನಲ್ಲಿ ಕಂಡು ಬರುವ ನೆಟ್ಟಿಗರ ಪೃವತ್ತಿ ವಿಶ್ಲೇಷಿಸಿದಾಗ ಬ್ಲೂವೇಲ್ ಸಂಬಂಧಿಸಿದ ಆಟಗಳ ಶೋಧದಲ್ಲಿ ಕೇರಳದಲ್ಲಿ ಶೇ. 100 ಏರಿಕೆ ಕಂಡಿದೆ. ಅನಂತರ ಸ್ಥಾನವನ್ನು ದಾಮನ್ ಹಾಗೂ ದಿಯು ಪಡೆದುಕೊಂಡಿದೆ. ಇಲ್ಲಿ ಈ ಆಟದ ಶೋಧ ಶೇ. 88ರಷ್ಟು ಏರಿಕೆಯಾಗಿದೆ.

ಬ್ಲೂವೇಲ್ ಸಂಬಂಧಿತ ಶೋಧಗಳಾದ ಬ್ಲೂವೇಲ್ ಆಪ್ಕ್, ಬ್ಲೂವೇಲ್ ಆ್ಯಪ್, ಬ್ಲೂವೇಲ್ ಗೇಮ್ ಡೌನ್‌ಲೋಡ್‌ನಲ್ಲಿ ಕೇರಳ ಇತರ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News