ಸ್ಪೇನ್: ಜನರ ಮೇಲೆ ವಾಹನ ನುಗ್ಗಿಸಿ 13 ಮಂದಿಯ ಹತ್ಯೆ, 32 ಮಂದಿಗೆ ಗಾಯ

Update: 2017-08-17 18:16 GMT

ಬಾರ್ಸಿಲೋನಾ,ಆ.17: ಸ್ಪೇನ್‌ನ ಬಾರ್ಸಿಲೋನಾ ನಗರದಲ್ಲಿ ಗುರುವಾರ ಶಂಕಿತ ಉಗ್ರನೊಬ್ಬ ಜನದಟ್ಟಣೆಯ ರಸ್ತೆಯಲ್ಲಿ ಶಂಕಿತ ಉಗ್ರನೊಬ್ಬ ತನ್ನ ವಾಹನವನ್ನು ಪಾದಚಾರಿಗಳ ಮೇಲೆ ನುಗ್ಗಿಸಿ ಕನಿಷ್ಠ 13 ಮಂದಿಯನ್ನು ಹತ್ಯೆಗೈದಿದ್ದು, 32ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

 ಬಾರ್ಸಿಲೋನಾದ ಪ್ರಸಿದ್ಧ ಲಾಸ್ ರಾಂಬ್ಲಾಸ್ ಪ್ರವಾಸಿ ಪ್ರದೇಶಲ್ಲಿ ಈ ದಾಳಿ ನಡೆದಿರುವುದಾಗಿ ಸ್ಪೇನ್ ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಳಿಕ ಚಾಲಕನ್ನು ಪರಾರಿಯಾಗಿರುವುದಾಗಿ ಮಾಧ್ಯಮವರದಿಗಳು ತಿಳಿಸಿವೆ. ಪೊಲೀಸರು ಇದೊಂದು ಭಯೋತ್ಪಾದಕ ದಾಳಿಯೆಂದು ಪರಿಗಣಿಸಿದ್ದು, ಹಂತ ಚಾಲಕನ ಬಂಧನಕ್ಕಾಗಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News