ಸ್ವಾತಂತ್ರ್ಯಾನಂತರ ಭಾರತದೊಂದಿಗೆ ವಿಲೀನಗೊಳ್ಳಲು ನಿರಾಕರಿಸಿದ ಐದು ರಾಜ್ಯಗಳು

Update: 2017-08-19 05:33 GMT


ಭಾರತದೊಂದಿಗೆ ಹಸ್ತಲಾಘವ ನೀಡಲು ಒಪ್ಪದ ಕೆಲವು ಹಠಮಾರಿ ರಾಜ್ಯಗಳಿದ್ದವು. ಅವುಗಳಲ್ಲಿ ಕೆಲವು ರಾಜ್ಯಗಳು ತಾವು ಸ್ವತಂತ್ರ ರಾಜ್ಯವಾಗಲು ಇದೇ ಸರಿಯಾದ ಸಮಯವೆಂದು ತಿಳಿದವು; ಇನ್ನು ಕೆಲವು ರಾಜ್ಯಗಳು ಪಾಕಿಸ್ತಾನದ ಒಂದು ಭಾಗವಾಗಲು ಬಯಸಿದವು. ಭಾರತದೊಂದಿಗೆ ವಿಲೀನಗೊಳ್ಳಲು ಒಪ್ಪದ ಐದು ರಾಜ್ಯಗಳ ‘ಕತೆ’ ಇಲ್ಲಿದೆ.

ಭಾರತದ ಇತಿಹಾಸದಲ್ಲಿ 1947ರ ಆಗಸ್ಟ್ 15ರ ಮಧ್ಯರಾತ್ರಿ ಪ್ರಾಯಶಃ ಅತ್ಯಂತ ಮಹತ್ವಪುರ್ಣವೆಂದು ದಾಖಲಾಗಿದೆ. ಜವಾಹರಲಾಲ್ ನೆಹರೂರವರ ಮಾತುಗಳಲ್ಲಿ ಆ ರಾತ್ರಿ ಭಾರತ ಬದುಕು ಮತ್ತು ಸ್ವಾತಂತ್ರದೊಂದಿಗೆ ಎಚ್ಚರಗೊಂಡಿತು. ನವಜೀವನ ಮತ್ತು ಸ್ವಾತಂತ್ರ ಉದಯಿಸಿದ ದಿನ ಅದು. ಆದರೆ ಭಾರತ ರಾಷ್ಟ್ರೀಯವಾದಿ ನಾಯಕರ ಪಾಲಿಗೆ ಆ ಸ್ವಾತಂತ್ರವು ಬಹಳ ಕಷ್ಟಪಟ್ಟು ಕನಸನ್ನು ನನಸಾಗಿಸಿಕೊಂಡ ಸ್ವಾತಂತ್ರವಾಗಿತ್ತು. ಹರಿದು ಹಂಚಿಹೋಗಿದ್ದ ನೂರಾರು ಪ್ರಾದೇಶಿಕ ಚೂರುಗಳನ್ನು ಒಂದಾಗಿಸುವ ಆಕಾಂಕ್ಷೆಯನ್ನು ನಿಜಗೊಳಿಸುವುದು ಸ್ವಾತಂತ್ರಗಳಿಸಿದ್ದಕ್ಕಿಂತ ಹೆಚ್ಚು ಕಷ್ಟದ ಕೆಲಸವಾಗಿತ್ತು, ಮತ್ತು ಆಗಸ್ಟ್ 15ರ ಪರಿಸ್ಥಿತಿಯಲ್ಲಿ ಆಗಿನ್ನೂ ಆ ಆಕಾಂಕ್ಷೆ ಕೈಗೂಡಿರಲಿಲ್ಲ. ಭಾರತದ ನೆಲದಿಂದ ಬ್ರಿಟಿಷರು ನಿರ್ಗಮಿಸುವುದರೊಂದಿಗೆ ಅವರು ತೊರೆದು ಹೋಗಿದ್ದ 500ಕ್ಕೂ ಹೆಚ್ಚು ರಾಜ ಸಂಸ್ಥಾನಗಳನ್ನು ಮತ್ತು ರಾಜ್ಯಗಳನ್ನು ಬಿಟ್ಟುಮಾಡುವುದು ಹೇಗೆ, ಎಂಬ ಪ್ರಶ್ನೆ ಉದ್ಭವಿಸಿತು.

ರಾಜ ಸಂಸ್ಥಾನಗಳನ್ನು, ರಾಜರ ಆಳ್ವಿಕೆಯಿದ್ದ ರಾಜ್ಯಗಳನ್ನು (ಪ್ರಿನ್ಸ್‌ಲಿ ಸ್ಟೇಟ್ಸ್) ಬ್ರಿಟಿಷರು ಅತಿಮುದ್ದು ಮಾಡಿದ್ದರು. ತಮ್ಮ ಲಾಭಕ್ಕಾಗಿ ಶೋಷಣೆ ಮಾಡಿದ್ದರು. ಬ್ರಿಟಿಷರ ವಸಹತುಶಾಹಿ ಆಡಳಿತದಲ್ಲಿ ಆ ಸಂಸ್ಥಾನಗಳು ಅರೆ-ಸ್ವಾಯತ್ತತೆಯ ಸ್ಥಾನಮಾನ ಉಳಿಸಿಕೊಂಡಿದ್ದವು ಮತ್ತು ಅವುಗಳು ಸ್ವತಂತ್ರ ಭಾರತಕ್ಕೆ ಎದುರಾದ ಅತ್ಯಂತ ಕಠಿಣವಾದ ಪಂಥಾಹ್ವಾನವಾಗಿದ್ದವು. ರಾಜರ ಹಾಗೂ ಬ್ರಿಟಿಷರ ಮಧ್ಯೆ ಇದ್ದ ಸಂಕೀರ್ಣ ಸಂಬಂಧದ ಬಗ್ಗೆ ಇತಿಹಾಸಕಾರರಾದ ಬಾರ್ಬರಾ ರಮುಸಾಕ್ ಹೇಳುತ್ತಾರೆ: ‘‘ಬ್ರಿಟಿಷ್ ವಸಾಹತುಶಾಹಿ ಅಧಿಕಾರಿಗಳು ಅವರನ್ನು ವಿಶ್ವಾಸಾರ್ಹ ಮಿಲಿಟರಿ ಮಿತ್ರರು ಎಂದು ಒಪ್ಪಿದರು, ದರ್ಪದ ಅಧಿಕಾರಿಗಳೆಂದು ಖಂಡಿಸಿದರು, ತಮ್ಮ ಪ್ರಜೆಗಳ ಸಹಜ ನಾಯಕರೆಂದು ಹೊಗಳಿದರು, ದುಂದುವೆಚ್ಚ ಮಾಡುವ ಪ್ಲೇ ಬಾಯ್‌ಗಳೆಂದು ಬೈದರು ಮತ್ತು ಅವರು ನೀಡಿದ ಭಾರೀ ಐಷಾರಾಮಿ ಆತಿಥ್ಯದ ಲಾಭ ಪಡೆದರು.’’ ತಮಗೆ ಮತ್ತು ರಾಜರಿಗೆ ಇಬ್ಬರಿಗೂ ಶತ್ರುವಾಗಿದ್ದ ಫ್ರೆಂಚರು ಪ್ರಬಲರಾಗುವುದನ್ನು ಹದ್ದುಬಸ್ತಿನಲ್ಲಿಡಲು ಬ್ರಿಟಿಷರಿಗೆ ಈ ರಾಜರು ಆವಶ್ಯಕವಾದ ಮಿತ್ರರಾಗಿದ್ದರು. ಹಾಗಾಗಿ, ರಾಜರಿಗೆ ಅವರ ಆಡಳಿತ ಪ್ರದೇಶಗಳ ಮೇಲೆ ಸ್ವಾಯತ್ತ ಅಧಿಕಾರ ನೀಡಲಾಯಿತು; ಆದರೆ ಮಂತ್ರಿಗಳನ್ನು ನೇಮಿಸುವ ಹಾಗೂ ತಮಗೆ ಬೇಕೆನ್ನಿಸಿದಾಗೆಲ್ಲ ಮಿಲಿಟರಿ ನೆರವು ಪಡೆಯುವ ಹಕ್ಕನ್ನು ಬ್ರಿಟಿಷರು ತಮ್ಮಲ್ಲೇ ಇಟ್ಟುಕೊಂಡರು.

ಬ್ರಿಟಿಷರು ಭಾರತದಿಂದ ಹಿಂದೆ ಸರಿಯುತ್ತಾರೆ ಎನ್ನುವುದನ್ನು ಘೋಷಿಸಿದ ಕೂಡಲೆ, ಅಧಿಕಾರಕ್ಕೆ ಬರುವ ಹೊಸ ಸರಕಾರಕ್ಕೆ ರಾಜ ಸಂಸ್ಥಾನಗಳ ಪ್ರಶ್ನೆಯನ್ನು ಬಗೆಹರಿಸುವುದು ಅನಿವಾರ್ಯ ವಾಯಿತು. 1930ರ ದಶಕದ ಕೊನೆಯಲ್ಲೇ ಭಾರತದ ರಾಜರುಗಳ ಆಳ್ವಿಕೆಯ ರಾಜ್ಯಗಳನ್ನು ಭಾರತದೊಂದಿಗೆ ವಿಲೀನಗೊಳಿಸುವ ತಮ್ಮ ಉದ್ದೇಶವನ್ನು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಿದ್ದರು. 1938ರಲ್ಲಿ ನಡೆದ ಹರಿಪುರ ಕಾಂಗ್ರೆಸ್ ಅಧಿವೇಶನದಲ್ಲಿ ಈ ಕೆಳಗಿನ ಶಬ್ದಗಳಲ್ಲಿ ಕಾಂಗ್ರೆಸ್‌ನ ಉದ್ದೇಶವನ್ನು ಸ್ಪಷ್ಟಗೊಳಿಸಲಾಗಿತ್ತು:

‘‘ಭಾರತದ ಇತರ ಭಾಗಗಳಲ್ಲಿ ಹೇಗೊ, ಹಾಗೆಯೇ ಸಮಾನವಾದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ ರಾಜಸಂಸ್ಥಾನಗಳಲ್ಲೂ ನೆಲಸಬೇಕೆಂದು ಕಾಂಗ್ರೆಸ್ ಹೇಳುತ್ತದೆ ಮತ್ತು ಆ ಸಂಸ್ಥಾನಗಳನ್ನು ಭಾರತದಿಂದ ಪ್ರತ್ಯೇಕಿಸಲಾಗದ ಭಾರತದ ಅವಿಭಾಜ್ಯ ಅಂಗಗಳೆಂದು ಪರಿಗಣಿಸುತ್ತದೆ. ಪೂರ್ಣ ಸ್ವರಾಜ್ ಅಥವಾ ಸಂಪೂರ್ಣ ಸ್ವಾತಂತ್ರ ಕಾಂಗ್ರೆಸ್‌ನ ಗುರಿ ಮತ್ತು ರಾಜಸಂಸ್ಥಾನಗಳೂ ಸೇರಿದಂತೆ ಇದು ಇಡೀ ದೇಶಕ್ಕೆ ಸಿಗಬೇಕಾದ ಸ್ವಾತಂತ್ರ, ಯಾಕೆಂದರೆ ವಿದೇಶೀ ಆಳ್ವಿಕೆಯಲ್ಲಿ ಹೇಗೋ ಹಾಗೆಯೇ ಸ್ವತಂತ್ರ ಭಾರತದಲ್ಲೂ ರಾಷ್ಟ್ರೀಯ ಏಕತೆ ಮತ್ತು ಒಗ್ಗಟ್ಟನ್ನು ನಾವು ಉಳಿಸಿಕೊಳ್ಳಲೇಬೇಕಾಗಿದೆ’’.

ರಾಜಸಂಸ್ಥಾನಗಳಲ್ಲಿ ಭಾರತದೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಗೆ ನೆರವಾಗುವುದಕ್ಕಾಗಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಮುಖ್ಯಸ್ಥರಾಗಿರುವ ಮತ್ತು ವಿ.ಪಿ. ಮೆನನ್ ಕಾರ್ಯದರ್ಶಿಯಾಗಿರುವ ಒಂದು ಹೊಸ ರಾಜ್ಯಾಂಗ ಇಲಾಖೆಯನ್ನು ಸ್ಥಾಪಿಸಲಾಯಿತು.
ಲಾರ್ಡ್ ವೌಂಟ್ ಬ್ಯಾಟನ್‌ರವರ ಮಾರ್ಗದರ್ಶನದಲ್ಲಿ ಇಂಡಿಯನ್ ಯೂನಿಯನ್‌ಗೆ ಸೇರುವಂತೆ ರಾಜರನ್ನು ವಿನಂತಿಸುವ, ಒತ್ತಾಯಿಸುವ ಮತ್ತು ಅವರಿಗೆ ಮನವರಿಕೆ ಮಾಡಿಸುವ ಜವಾಬ್ದಾರಿಯನ್ನು ಈ ಇಬ್ಬರಿಗೆ ವಹಿಸಲಾಯಿತು. ಯೂನಿಯನ್‌ನೊಂದಿಗೆ ಸೇರಿಕೊಂಡ ರಾಜ್ಯಗಳಲ್ಲಿ ಬಿಕಾನೆರ್, ಬರೋಡಾ ಮತ್ತು ರಾಜಸ್ಥಾನದ ಕೆಲವು ಸಂಸ್ಥಾನಗಳು ಮೊದಲ ಸಂಸ್ಥಾನಗಳು ಇದಕ್ಕೆ ವ್ಯತಿರಿಕ್ತವಾಗಿ ಭಾರತದೊಂದಿಗೆ ಹಸ್ತಲಾಘವ ನೀಡಲು ಒಪ್ಪದ ಕೆಲವು ಹಠಮಾರಿ ರಾಜ್ಯಗಳಿದ್ದವು. ಅವುಗಳಲ್ಲಿ ಕೆಲವು ರಾಜ್ಯಗಳು ತಾವು ಸ್ವತಂತ್ರ ರಾಜ್ಯವಾಗಲು ಇದೇ ಸರಿಯಾದ ಸಮಯವೆಂದು ತಿಳಿದವು; ಇನ್ನು ಕೆಲವು ರಾಜ್ಯಗಳು ಪಾಕಿಸ್ತಾನದ ಒಂದು ಭಾಗವಾಗಲು ಬಯಸಿದವು. ಭಾರತದೊಂದಿಗೆ ವಿಲೀನಗೊಳ್ಳಲು ಒಪ್ಪದ ಐದು ರಾಜ್ಯಗಳ ‘ಕತೆ’ ಇಲ್ಲಿದೆ.

ತಿರುವಾಂಕೂರು
ಇಂಡಿಯನ್ ಯೂನಿಯನ್‌ನೊಂದಿಗೆ ವಿಲೀನವಾಗಲು ನಿರಾಕರಿಸಿದ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್ ನಾಯಕತ್ವನ್ನು ಪ್ರಶ್ನಿಸಿದ ಮೊದಲ ರಾಜಸಂಸ್ಥಾನಗಳಲ್ಲಿ ದಕ್ಷಿಣಭಾರತದ ಕಡಲತೀರದ ತಿರುವಾಂಕೂರು ಮೊದಲರಾಜ್ಯ. ಸಮುದ್ರವ್ಯಾಪಾರಕ್ಕೆ ಉತ್ತಮವಾದ ಆಯಕಟ್ಟಿನ ಸ್ಥಳದಲ್ಲಿದ್ದ ಮತ್ತು ಮಾನವ ಹಾಗೂ ಖನಿಜ ಸಂಪನ್ಮೂಲಗಳಲ್ಲಿ ಶ್ರೀಮಂತವಾಗಿದ್ದ ರಾಜ್ಯ. ಇದು ತಿರುವಾಂಕೂರಿನ ದಿವಾನ ಹಾಗೂ ಓರ್ವ ಪ್ರಸಿದ್ಧ ವಕೀಲರಾಗಿದ್ದ ಸರ್ ಸಿಪಿ ರಾಮಸ್ವಾಮಿಯವರು 1946ರ ವೇಳೆಗಾಗಲೇ, ಸ್ವತಂತ್ರವಾದ ಮತ್ತು ಇಂಡಿಯನ್ ಯೂನಿಯನ್‌ನೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳಲು ಮುಕ್ತವಿರುವ ಒಂದು ರಾಜ್ಯ ರಚಿಸುವ ತನ್ನ ಉದ್ದೇಶವನ್ನು ಘೋಷಿಸಿದ್ದರು. ಇತಿಹಾಸಕಾರ ರಾಮ ಚಂದ್ರ ಗುಹಾರವರ ಪ್ರಕಾರ, ಸ್ವತಂತ್ರಗೊಳ್ಳುವ ತಿರುವಾಂಕೂರಿನ ಪ್ರಯತ್ನಕ್ಕೆ, ನಿಜವಾಗಿ, ಮುಹಮ್ಮದ್ ಅಲಿ ಜಿನ್ನಾರವರ ಬೆಂಬಲ ಇತ್ತು. ತಿರುವಾಂಕೂರಿನಲ್ಲಿ ಹೇರಳವಾಗಿ ದೊರಕುತ್ತಿದ್ದ ಮೊನಜೈಟ್ ಎಂಬ ಒಂದು ಖನಿಜದ ಮೇಲೆ ಕಣ್ಣಿಟ್ಟಿದ್ದ ಬ್ರಿಟಿಷ್ ಸರಕಾರ ಕೂಡ ಸ್ವತಂತ್ರ ತಿರುವಾಂಕೂರು ರಾಜ್ಯ ಉದಯಿಸುವುದಕ್ಕೆ ರಹಸ್ಯವಾಗಿ ಬೆಂಬಲ ನೀಡುತ್ತಿದ್ದು ದರಿಂದ, ಸರ್ ಸಿಪಿ ಅಯ್ಯರ್ ಬ್ರಿಟಿಷ್ ಸರಕಾರದೊಂದಿಗೆ ಗುಪ್ತವಾದ ಸಂಬಂಧ ಗಳನ್ನಿಟ್ಟುಕೊಂಡಿದ್ದರೆಂದು ಹೇಳಲಾಗಿದೆ. 1947ರ ಜುಲೈವರೆಗೆ ಕೂಡ ತನ್ನ ನಿಲುವನ್ನು ಬದಲಿಸದ ದಿವಾನ್ ಅಯ್ಯರ್, ಕೇರಳ ಸಮಾಜವಾದಿ ಪಕ್ಷದ ಸದಸ್ಯನೊಬ್ಬ ಅವರ ಮೇಲೆ ನಡೆಸಿದ ಹತ್ಯಾ ಪ್ರಯತ್ನದಲ್ಲಿ ಬದುಕಿ ಉಳಿದದ್ದೇ ತಡ, ಅವರು ತನ್ನ ಮನಸ್ಸನ್ನು ಬದಲಾಯಿಸಿದರು. 1947ರ ಜುಲೈ 30ರಂದು ತಿರುವಾಂಕೂರು ಭಾರತದೊಂದಿಗೆ ವಿಲೀನಗೊಂಡಿತು.

ಜೋಧ್‌ಪುರ
  ಒಬ್ಬ ಹಿಂದೂ ರಾಜ ಹಾಗೂ ಬೃಹತ್ ಹಿಂದೂ ಜನಸಂಖ್ಯೆ ಹೊಂದಿದ್ದರೂ ಪಾಕಿಸ್ತಾನದ ಕಡೆ ವಾಲಿದ ರಜಪೂತ ರಾಜಸಂಸ್ಥಾನವಾದ ಜೋಧ್‌ಪುರ ಒಂದು ವಿಚಿತ್ರ ಪ್ರಕರಣದ ಉದಾಹರಣೆಯಾಗಿದೆ. ಅಲ್ಲಿಯ ರಾಜಕುಮಾರ, ಮಹಾರಾಜ ಹನವಂತ್ ಸಿಂಗ್, ಭಾರತದೊಂದಿಗೆ ವಿಲೀನವಾಗುವ ದೃಢ ಇಚ್ಛೆಹೊಂದಿದ್ದರೂ, ಸದ್ಯವೇ ಜನಿಸಲಿರುವ ಪಾಕಿಸ್ತಾನಕ್ಕೆ ತನ್ನ ರಾಜ್ಯದ ಗಡಿ ಹೊಂದಿಕೊಂಡು ಇರುವುದರಿಂದ ತನ್ನ ರಾಜ್ಯವು ಭಾರತಕ್ಕಿಂತ ಪಾಕಿಸ್ತಾನದೊಂದಿಗೆ ಸೇರುವುದು ಹೆಚ್ಚು ಲಾಭದಾಯಕವಾಗಬಹುದೆಂಬ ವಿಚಾರ ಅದು ಹೇಗೋ ಆತನ ತಲೆಗೆ ಹೊಳೆಯಿತು. ಅಲ್ಲದೆ, ಮಿಲಿಟರಿ ಹಾಗೂ ಕೃಷಿ ಸಂಬಂಧಿ ನೆರವಿನೊಂದಿಗೆ ಕರಾಚಿಯಲ್ಲಿ ಸಂಪೂರ್ಣ ಬಂದರು ಸವಲತ್ತುಗಳನ್ನು ನೀಡುವ ಕೊಡುಗೆ ನೀಡಿದ ಜಿನ್ನಾ, ಆತನಿಗೆ ಪಾಕಿಸ್ತಾನದೊಂದಿಗೆ ಸೇರುವಂತೆ ಆಮಿಷ ಒಡ್ಡಿದರು. ಆದರೆ ಜೋಧ್‌ಪುರ ಪಾಕಿಸ್ತಾನಕ್ಕೆೆ ಸೇರುವ ಸಾಧ್ಯತೆ ಇದೆ ಎಂದು ಪಟೇಲ್‌ರವರಿಗೆ ತಿಳಿದಾಗ, ಅವರು ಕೂಡಲೇ ಅಲ್ಲಿಯ ರಾಜನನ್ನು ಸಂಪರ್ಕಿಸಿ, ಆತನಿಗೆ ಸಾಕಷ್ಟು ಲಾಭಗಳ ಕೊಡುಗೆ ನೀಡಿದರು, ಮತ್ತು ಒಂದು ಮುಸ್ಲಿಂ ದೇಶದೊಂದಿಗೆ ಸೇರಿಕೊಳ್ಳುವುದರಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ವಿವರಿಸಿಹೇಳಿದರು. ಪರಿಣಾಮವಾಗಿ, ಆತನ ಮನಸ್ಸನ್ನು ಒಲಿಸಿ, ಆತನ ರಾಜ್ಯ ಭಾರತದೊಂದಿಗೆ ಉಳಿಯುವಂತೆ ನೋಡಿಕೊಳ್ಳಲಾಯಿತು ತನ್ನ ಪುಸ್ತಕ ‘ಇಂಡಿಯಾ ಆಫ್ಟರ್ ಗಾಂಧಿ’ಯಲ್ಲಿ ಇತಿಹಾಸಕಾರ ರಾಮಚಂದ್ರ ಗುಹಾ ಬರೆಯು ತ್ತಾರೆ: ‘‘ಭಾರತದೊಂದಿಗೆ ವಿಲೀನಗೊಳ್ಳಲು ಒಪ್ಪಿಗೆ ಸೂಚಿಸುವ ದಾಖಲೆ ಪತ್ರವನ್ನು ರಾಜನ ಮುಂದೆ ಹಿಡಿದಾಗ ಆತ ನಾಟಕೀಯವಾಗಿ ಒಂದು ರಿವಾಲ್ವರ್ ಅನ್ನು ಹೊರತೆಗೆದು ಕಾರ್ಯದರ್ಶಿ ತಲೆಗೆ ಗುರಿಮಾಡಿ ಹೇಳಿದ, ‘ನಾನು ನಿನ್ನ ಆಜ್ಞೆಯನ್ನು ಒಪ್ಪುವುದಿಲ್ಲ.’ ಆದರೆ, ಕೆಲವು ನಿಮಿಷಗಳ ನಂತರ ಆತ ತಣ್ಣಗಾದ; ಸಮಾಧಾನಮಾಡಿಕೊಂಡು ದಾಖಲೆಗೆ ಸಹಿಹಾಕಿದ.’’

ಭೋಪಾಲ್
ಸ್ವತಂತ್ರರಾಜ್ಯವೆಂದು ಘೋಷಿಸ ಬಯಸಿದ ಇನ್ನೊಂದು ರಾಜ್ಯ ಭೋಪಾಲ್. ಬಹುಸಂಖ್ಯಾತ ಹಿಂದೂಗಳು ಇದ್ದ ಭೋಪಾಲ್‌ನಲ್ಲಿ ಒಬ್ಬ ಮುಸ್ಲಿಂ ನವಾಬ, ಹಮೀದುಲ್ಲಾ ಖಾನ್ ಆಡಳಿತ ನಡೆಸುತ್ತಿದ್ದ. ಮುಸ್ಲಿಂ ಲೀಗ್‌ನ ಒಬ್ಬ ಆಪ್ತಮಿತ್ರನಾಗಿದ್ದ ನವಾಬ ಕಾಂಗ್ರೆಸ್ ಆಡಳಿತದ ಪ್ರಬಲ ವಿರೋಧಿಯಾಗಿದ್ದ. ತಾನು ಸ್ವತಂತ್ರ ರಾಜ್ಯವಾಗುವ ತನ್ನ ನಿರ್ಧಾರವನ್ನು ಆತ ವೌಂಟ್‌ಬ್ಯಾಟನ್‌ಗೆ ಸ್ಪಷ್ಟವಾಗಿ ತಿಳಿಸಿದ್ದ. ಆದರೆ ತನಗೆ ಅತ್ಯಂತ ಸಮೀಪದಲ್ಲಿರುವ ಡೊಮಿನಿಯನ್‌ನಿಂದ ಯಾವನೇ ಆಡಳಿತಗಾರ ಓಡಿಹೋಗಲು ಸಾಧ್ಯವಿಲ್ಲವೆಂದು ವೌಂಟ್‌ಬ್ಯಾಟನ್ ಆತನಿಗೆ ಉತ್ತರ ಬರೆದಿದ್ದರು. 1947ರ ಜುಲೈ ವೇಳೆಗೆ, ಭಾರತದೊಂದಿಗೆ ಬಹಳಷ್ಟು ಮಂದಿ ರಾಜರು ವಿಲೀನಗೊಂಡಿದ್ದಾರೆಂದು ತಿಳಿದುಕೊಂಡ ನವಾಬ ಅವರಂತೆಯೇ ತಾನೂ ವಿಲೀನಗೊಳ್ಳಲು ನಿರ್ಧರಿಸಿದ.

ಹೈದರಾಬಾದ್
ರಾಜಸಂಸ್ಥಾನಗಳಲ್ಲಿ ಅತ್ಯಂತ ಹೆಚ್ಚು ಮಹತ್ವಪುರ್ಣವಾದ ಹಾಗೂ ಸಂಕೀರ್ಣವಾದ ಪಂಥಾಹ್ವಾನ ಒಡ್ಡಿದ ಸಂಸ್ಥಾನ ಹೈದರಾಬಾದ್. ದಕ್ಷಿಣ ಪೀಠಭೂಮಿಯಲ್ಲಿರುವ ಈ ಸಂಸ್ಥಾನ ಭಾರತದ ಕೇಂದ್ರ ಭಾಗದ ಗಣನೀಯ ಪಾಲನ್ನು ಆವರಿಸಿಕೊಂಡಿತ್ತು. ದೇಶದ ಸ್ವಾತಂತ್ರದ ಅವಧಿಯಲ್ಲಿ ನಿಜಾಮ್‌ಮೀರ್ ಉಸ್ಮಾನ್ ಆಲಿ ಬಹುಸಾಲು ಹಿಂದೂ ಜನಸಮುದಾಯವಿರುವ ರಾಜ್ಯದ ಆಡಳಿತ ನಡೆಸುತ್ತಿದ್ದ ಬ್ರಿಟಿಷರು ಭಾರತವನ್ನು ತ್ಯಜಿಸಲು ನಿರ್ಧರಿಸಿದಾಗ, ರಾಜನು ಒಂದು ಸ್ವತಂತ್ರರಾಜ್ಯವಾಗುವ ತನ್ನ ಬೇಡಿಕೆಯನ್ನು ಸ್ಪಷ್ಟಪಡಿಸಿದ. ಮತ್ತು ಆ ಬಳಿಕ ಬ್ರಿಟಿಷ್ ಕಾಮನ್‌ವೆಲ್ತ್ ರಾಷ್ಟ್ರಗಳ ಒಂದು ಸದಸ್ಯದೇಶವಾಗುವ ಬಗ್ಗೆ ಖಚಿತ ಅಭಿಪ್ರಾಯ ಹೊಂದಿದ್ದ. ಆದರೆ ಬ್ರಿಟನ್‌ನ ರಾಣಿಯು ಹೈದರಾಬಾದ್ ಬ್ರಿಟಿಷ್ ಕಾಮನ್‌ವೆಲ್ತ್‌ನ ಸದಸ್ಯ ರಾಷ್ಟ್ರವಾಗಲು ಒಪ್ಪುವುದಿಲ್ಲವೆಂದು ವೌಂಟ್‌ಬ್ಯಾಟನ್ ಆತನಿಗೆ ಸ್ಪಷ್ಟಪಡಿಸಿದರು.
ದಿನ ಕಳೆದಂತೆ ಹೈದರಾಬಾದ್ ಕುರಿತ ವಿವಾದ, ಜಗಳ ತೀವ್ರಗೊಳ್ಳುತ್ತಿದ್ದಂತೆಯೇ, ರಾಜ್ಯಾದ್ಯಂತ ಹಿಂಸೆ ಮತ್ತು ಮತಪ್ರದರ್ಶನಗಳು ಮಾಮೂಲಿಯಾದವು. ನಿಜಾಮನಿಗೆ ಕೂಡ ಜಿನ್ನಾರ ಬೆಂಬಲವಿತ್ತು,. ಆದರೆ ಸ್ವತಂತ್ರ ಹೈದರಾಬಾದ್ ಎನ್ನುವುದು ಭಾರತದ ಹೊಟ್ಟೆಯಲ್ಲಿ ಕ್ಯಾನ್ಸರ್ ಗಡ್ಡೆಗೆ ಸಮಾನವೆಂದು ಪಟೇಲರಿಗನ್ನಿಸಿತು.
1948ರ ಜೂನ್‌ನಲ್ಲಿ ವೌಂಟ್‌ಬ್ಯಾಟನ್ ರಾಜೀನಾಮೆ ನೀಡಿದ ಕೂಡಲೆ ಕಾಂಗ್ರೆಸ್ ಸರಕಾರ ಚುರುಕಾಯಿತು. ದೃಢ ನಿರ್ಧಾರ ತಳೆದ ಅದು ಸೆಪ್ಟಂಬರ್ 13ರಂದು ಹೈದರಾಬಾದ್‌ಗೆ ಸೇನೆಯನ್ನು ಕಳುಹಿಸಿತು. ಇದು ಮುಂದಕ್ಕೆ ‘ಆಪರೇಶನ್ ಪೋಲೋ’ಎಂದು ಕರೆಯಲ್ಪಟ್ಟಿತು. ಸುಮಾರು ನಾಲ್ಕು ದಿನಗಳ ಕಾಲ ನಡೆದ ಸಶಸ್ತ್ರ ಮುಖಾಮುಖಿಯಲ್ಲಿ ಭಾರತೀಯ ಸೇನೆಯು ರಾಜ್ಯದ ಮೇಲೆ ಪೂರ್ಣ ನಿಯಂತ್ರಣ ಸಾಧಿಸಿತು. ಬಳಿಕ, ಶರಣಾಗತನಾದ ನಿಜಾಮನಿಗೆ ಪ್ರತಿಫಲ ನೀಡುವ ಒಂದು ಪ್ರಯತ್ನವಾಗಿ ಆತನನ್ನು ಹೈದರಾಬಾದ್ ರಾಜ್ಯದ ರಾಜ್ಯಪಾಲನನ್ನಾಗಿ ಮಾಡಲಾಯಿತು.

ಜುನಾಗಡ
ಗುಜರಾತಿನ ಜುನಾಗಡದ ನವಾಬ್ ಮುಹಮ್ಮದ್ ಮಹಬತ್ ಖಾಂಜಿ ಆಳುತ್ತಿದ್ದ ರಾಜ್ಯವಾಗಿತ್ತು. 1947ರ ಜುಲೈ 25ರಂದು ಲಾರ್ಡ್ ವೌಂಟ್‌ಬ್ಯಾಟನ್ ರಾಜರನ್ನು ಉದ್ದೇಶಿಸಿ ಮಾತನಾಡಿ ದಾಗ, ತಾನು ನವಾಬನಿಗೆ ಭಾರತದೊಂದಿಗೆ ವಿಲೀನಗೊಳ್ಳುವಂತೆ ಸಲಹೆ ನೀಡುವುದಾಗಿ ಜುನಾಗಡದ ದಿವಾನ ಹೇಳಿದ್ದ.

 ಕೃಪೆ:  indianexpress.com

Writer - ಅದ್ರಿಜಾ ರಾಯ್ ಚೌಧುರಿ

contributor

Editor - ಅದ್ರಿಜಾ ರಾಯ್ ಚೌಧುರಿ

contributor

Similar News