ಈ ಸ್ಟಾರ್ ಕ್ರಿಕೆಟಿಗರು ನಿಮಿಷವೊಂದಕ್ಕೆ ಗಳಿಸುವ ಹಣ ಎಷ್ಟು ಗೊತ್ತೇ ?

Update: 2017-08-20 06:51 GMT

ಹೊಸದಿಲ್ಲಿ, ಆ.20: ಕ್ರಿಕೆಟ್ ಆಟಗಾರರು ಹಣ ಗಳಿಕೆಯಲ್ಲಿ ಕುಬೇರರಾಗಿ ಮಿಂಚುತ್ತಿದ್ದಾರೆ. ಯಾವುದೇ ಒಬ್ಬ  ಆಟಗಾರ ಯಶಸ್ಸು ಸಾಧಿಸುತ್ತಿದ್ದಂತೆಯೇ ಆತ ರಾತ್ರೋರಾತ್ರಿ ಸ್ಟಾರ್ ಆಗಿ ಬಿಡುತ್ತಾನೆ. ಅವನ ಜನಪ್ರಿಯತೆಯ ಲಾಭ ಪಡೆಯಲು  ಜಾಹೀರಾತು ಕಂಪನಿಗಳು ಅಂತವರ ಹಿಂದೆ ಮುಗಿ ಬೀಳುತ್ತವೆ. ಇದರಿಂದಾಗಿ ಆಟಗಾರರ ಖಾತೆಗೆ ಹಣದ ಹೊಳೆ ಹರಿದು ಬರುತ್ತದೆ.

ಪ್ರತಿ ನಿಮಿಷಕ್ಕೆ ಗರಿಷ್ಠ ಆದಾಯ ಗಳಿಸುವ ಆಟಗಾರರ ವಿವರ ಇಂತಿವೆ

1. ವಿರಾಟ್ ಕೊಹ್ಲಿ

ನಿಮಿಷಕ್ಕೆ ಗಳಿಸುವ ಆದಾಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಲ್ಲರಿಗಿಂತಲೂ ಮುಂದಿದ್ದಾರೆ. ಅವರು ನಿಮಿಷಕ್ಕೆ ಗಳಿಸುವ  ಆದಾಯ ಎಷ್ಟು ಗೊತ್ತೇ   ರೂ. 5,811.21

2. ಮಹೇಂದ್ರ ಸಿಂಗ್ ಧೋನಿ

ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಿ , ಸೀಮಿತ  ಓವರ್ ಗಳ ಕ್ರಿಕೆಟ್ ನಾಯಕತ್ವವನ್ನು ತ್ಯಜಿಸಿ ಟೀಮ್ ಇಂಡಿಯಾದ  ಹಿರಿಯ ಆಟಗಾರರಾಗಿರುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮಹೇಂದ್ರ ಸಿಂಗ್ ಧೋನಿ ಗಳಿಕೆಯಲ್ಲಿ ಎರಡನೆ ಸ್ಥಾನದಲ್ಲಿದ್ದಾರೆ. ಧೋನಿ ಗಳಿಕೆ  ರೂ 3,638.30.

3. ಕ್ರಿಸ್ ಗೇಲ್

ವೆಸ್ಟ್ ಇಂಡೀಸ್ ನ ಸ್ಪೋಟಕ ದಾಂಡಿಗ ಕ್ರಿಸ್ ಗೇಲ್ ಗಳಿಕೆಯಲ್ಲಿ ಮೂರನೆ ಸ್ಥಾನದಲ್ಲಿದ್ದಾರೆ. ಅವರ ಗಳಿಕೆ ನಿಮಿಷಕ್ಕೆ ರೂ. 950.34

4. ಪಾಕಿಸ್ತಾನದ ಶಾಹಿದ್ ಆಫ್ರಿದಿ

ಪಾಕಿಸ್ತಾನದ ಕ್ರಿಕೆಟಿಗ ಶಾಹಿದ್ ಅಫ್ರಿದಿ ಏಕದಿನ ಕ್ರಿಕೆಟ್ ನಲ್ಲಿ ಗರಿಷ್ಠ ಸಿಕ್ಸರ್ ಸಿಡಸಿದವರು. ಟ್ವೆಂಟಿ -20 ಕ್ರಿಕೆಟ್ ನಲ್ಲಿ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಂಡವರು. ಅವರ ಆದಾಯ ರೂ ಪ್ರತಿ ನಿಮಿಷಕ್ಕೆ ರೂ. 798. 19

5. ವೀರೇಂದ್ರ ಸೆಹ್ವಾಗ್

ಟೀಮ್ ಇಂಡಿಯಾದ ಸ್ಪೋಟಕ ದಾಂಡಿಗ ವೀರೇಂದ್ರ ಸೆಹ್ವಾಗ್ ಕ್ರಿಕೆಟ್ ನಿಂದ ದೂರವಾಗಿದ್ದರೂ ಅವರ ಜನಪ್ರಿಯತೆ ದೂರವಾಗಿಲ್ಲ. ಅವರ ಗಳಿಕೆ ಪ್ರತಿನಿಮಿಷಕ್ಕೆ ರೂ.734.717.

6. ಎಬಿ ಡಿವಿಲಿಯರ್ಸ್

ದಕ್ಷಿಣ ಆಫ್ರಿಕದ ಜನಪ್ರಿಯ ಆಟಗಾರ ಎಬಿ ಡಿವಿಲಿಯರ್ಸ್ ಪ್ರತಿನಿಮಿಷಕ್ಕೆ ಗಳಿಸುವ ಆದಾಯ ನಿಮಿಷಕ್ಕೆ ರೂ. 696.71

7. ಶೇನ್ ವ್ಯಾಟ್ಸನ್

ಆಸ್ಟ್ರೇಲಿಯದ ಮಾಜಿ ಆಲ್ ರೌಂಡರ್  ಅವರು ವಿಶ್ವದ ಎಲ್ಲ ಟ್ವೆಂಟಿ -20 ಲೀಗ್ ಗಳಲ್ಲಿ ಆಡಿದವರು ಅವರ ಗಳಿಕೆ ಪ್ರತಿ ನಿಮಿಷಕ್ಕೆ ರೂ.696.31

8. ಗೌತಮ್ ಗಂಭೀರ್

ಟೀಮ್ ಇಂಡಿಯಾದ ಮಾಜಿ ಆರಂಭಿಕ ದಾಂಡಿಗ ಗೌತಮ್ ಗಂಭೀರ್ ಗಳಿಸುವ ಆದಾಯ ನಿಮಿಷಕ್ಕೆ ರೂ. 633.15

9. ಯುವರಾಜ್ ಸಿಂಗ್

2011ರಲ್ಲಿ ವಿಶ್ವಕಪ್ ನ ಚಾಂಪಿಯನ್ ಆಟಗಾರ ಯುವರಾಜ್ ಸಿಂಗ್ ಗಳಿಕೆ ನಿಮಿಷಕ್ಕೆ ರೂ 481. 91

10. ಮೈಕಲ್ ಕ್ಲರ್ಕ್

ಆಸ್ಟ್ರೇಲಿಯದ ವಿಶ್ವಕಪ್ ಜಯಿಸಿದ ತಂಡದ ನಾಯಕ ಮೈಕಲ್ ಕ್ಲರ್ಕ್ ಆದಾಯ ನಿಮಿಷಕ್ಕೆ ರೂ. 367.57 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News