×
Ad

ಅಂಡರ್-19 ವಿಶ್ವಕಪ್ ವಿಜೇತರಿಗೆ ನಗದು ಬಹುಮಾನ ಪ್ರಕಟಿಸಿದ ಪಾಕಿಸ್ತಾನ ಪ್ರಧಾನಿ

Update: 2025-12-22 20:31 IST

ಶಹಬಾಝ್ ಶರೀಫ್ | Photo Credit : PTI 

ಲಾಹೋರ್, ಡಿ.22: ದುಬೈನಲ್ಲಿ ರವಿವಾರ ಏಶ್ಯಕಪ್ ಪ್ರಶಸ್ತಿಯನ್ನು ಗೆದ್ದಿರುವ ಅಂಡರ್-19 ಕ್ರಿಕೆಟ್ ತಂಡಕ್ಕೆ ಪಾಕಿಸ್ತಾನದ ಪ್ರಧಾನ ಮಂತ್ರಿ ಶಹಬಾಝ್ ಶರೀಫ್ ಭಾರೀ ಮೊತ್ತದ ಬಹುಮಾನವನ್ನು ಪ್ರಕಟಿಸಿದ್ದಾರೆ.

ಸೋಮವಾರ ಇಸ್ಲಾಮಾಬಾದ್‌ನಲ್ಲಿ ಆಟಗಾರರು ಹಾಗೂ ಅಧಿಕಾರಿಗಳಿಗೆ ವಿಶೇಷ ಕಾರ್ಯಕ್ರಮ ಏರ್ಪಡಿಸಿದ್ದ ಶರೀಫ್, ಈ ವೇಳೆ ಪ್ರತಿಯೊಬ್ಬ ಆಟಗಾರನಿಗೆ ತಲಾ 10 ಮಿಲಿಯನ್ ಪಾಕಿಸ್ತಾನ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದರು.

ಪಾಕಿಸ್ತಾನ ತಂಡವು ರವಿವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವನ್ನು 191 ರನ್‌ಗಳ ಅಂತರದಿಂದ ಮಣಿಸಿ ಅಂಡರ್-19 ಏಶ್ಯಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರತಿಯೊಬ್ಬರು ತಂಡದ ಪ್ರದರ್ಶನವನ್ನು ಶ್ಲಾಘಿಸಿದರು.

ಮಾಧ್ಯಮದೊಂದಿಗೆ ಮಾತನಾಡಿದ ಟೀಮ್ ಸಲಹೆಗಾರ ಹಾಗೂ ಮ್ಯಾನೇಜರ್ ಸರ್ಫರಾಝ್ ಅಹ್ಮದ್ ಈ ಘೋಷಣೆಯನ್ನು ದೃಢಪಡಿಸಿದರು.

‘‘ಪ್ರಧಾನಿಮಂತ್ರಿ ಶರೀಫ್ ಅವರು ಪ್ರತಿಯೊಬ್ಬ ಆಟಗಾರಿಗೆ ತಲಾ 10 ಮಿಲಿಯನ್ ರೂಪಾಯಿಯನ್ನು ಘೋಷಿಸಿದ್ದಾರೆ. ನಾನು ಇಂತಹ ಪ್ರತಿಭಾವಂತ ಯುವ ಆಟಗಾರರೊಂದಿಗೆ ಕೆಲಸ ಮಾಡಿ ಖುಷಿಪಟ್ಟಿದ್ದೇನೆ. ಈ ಎಲ್ಲ ಆಟಗಾರರು ಕ್ರಿಕೆಟ್‌ನಲ್ಲಿ ಉಜ್ವಲ ಭವಿಷ್ಯ ಹೊಂದಿದ್ದಾರೆ’’ ಎಂದು ಅಹ್ಮದ್ ಹೇಳಿದ್ದಾರೆ.

‘‘ಈ ಗೆಲುವು ಎಚ್ಚರಿಕೆಯ ಯೋಜನೆ ಹಾಗೂ ದೀರ್ಘ ಕಾಲದ ತಯಾರಿಯ ಫಲಿತಾಂಶವಾಗಿದೆ. ಜೂನ್‌ನಲ್ಲಿ ನಮ್ಮ ತಯಾರಿ ಆರಂಭವಾಗಿತ್ತು. ಟ್ರಯಲ್ಸ್ ನಂತರ ಸುಮಾರು 70 ಆಟಗಾರರನ್ನು ಆಯ್ಕೆ ಮಾಡಿದ್ದೇವೆ. ಅದನ್ನು 20ಕ್ಕೆ ಇಳಿಸಿದ್ದೆವು. ಬಹುತೇಕ ಆಟಗಾರರಿಗೆ ದೇಶೀಯ ಮಟ್ಟದಲ್ಲಿ 50 ಓವರ್ ಕ್ರಿಕೆಟ್ ಆಡಲು ಅವಕಾಶ ನೀಡಲಾಗಿತ್ತು’’ ಎಂದು ಪಾಕಿಸ್ತಾನ ತಂಡದ ಮುಖ್ಯ ಕೋಚ್ ಶಾಹಿದ್ ಅನ್ವರ್ ಹೇಳಿದ್ದಾರೆ.

ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು 8 ವಿಕೆಟ್‌ಗಳ ನಷ್ಟಕ್ಕೆ 347 ರನ್ ಕಲೆ ಹಾಕಿತ್ತು. ಸಮೀರ್ ಮಿನ್ಹಾಸ್ 172 ರನ್ ಗಳಿಸಿ ಪಂದ್ಯದಲ್ಲಿ ಮಿಂಚಿದ್ದರು. ಪಾಕಿಸ್ತಾನದ ವೇಗದ ಬೌಲರ್‌ಗಳು ಭಾರತದ ವಿರುದ್ಧ ಪ್ರಾಬಲ್ಯ ಸಾಧಿಸಿದ್ದು, ಎದುರಾಳಿಯನ್ನು ಕೇವಲ 156 ರನ್‌ಗೆ ನಿಯಂತ್ರಿಸಿದ್ದರು.

ಭಾರತ ತಂಡದ ನಾಯಕ ಆಯುಷ್ ಮ್ಹಾತ್ರೆ, ಫೈನಲ್ ಪಂದ್ಯದಲ್ಲಿ ತನ್ನ ತಂಡ ದೊಡ್ಡ ತಪ್ಪು ಮಾಡಿದೆ ಎಂದು ಒಪ್ಪಿಕೊಂಡರು.

‘‘ನಾವು ಮೊದಲಿಗೆ ಬೌಲಿಂಗ್ ಮಾಡುವ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಂಡಿದ್ದೆವು. ಬೌಲಿಂಗ್‌ನಲ್ಲಿ ಅಸ್ಥಿರ ಪ್ರದರ್ಶನ ನೀಡಿದ್ದೆವು. 50 ಓವರ್‌ಗಳನ್ನು ಆಡುವ ಸರಳ ಯೋಜನೆ ಹೊಂದಿದ್ದೆವು. ಹುಡುಗರು ನಿಜವಾಗಿಯೂ ಉತ್ತಮವಾಗಿ ಆಡಿದ್ದಾರೆ. ಪಂದ್ಯಾವಳಿಯು ನಮಗೆ ಉತ್ತಮವಾಗಿತ್ತು. ಕೆಲವು ಆಟಗಾರರು ಗಮನಾರ್ಹ ಪ್ರದರ್ಶನ ನೀಡಿದ್ದರು’’ಎಂದು ಆಯುಷ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News