ಸೇನೆಯಲ್ಲಿ ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾತಿ: ಸಚಿವ ಅಠಾವಳೆ ಆಗ್ರಹ
Update: 2017-08-20 18:12 IST
ಹೊಸದಿಲ್ಲಿ,ಆ.20: ಭಾರತೀಯ ಸೇನೆಯಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯನ್ನು ಒದಗಿಸುವಂತೆ ಕೇಂದ್ರ ಸಚಿವ ರಾಮದಾಸ ಅಠಾವಳೆ ಅವರು ರವಿವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ. ಕಳೆದ ಜುಲೈ 1ರಂದು ಇದೇ ಅಠಾವಳೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಎಸ್‌ಸಿ ಮತ್ತು ಎಸ್‌ಟಿಗಳಿಗೆ ಮೀಸಲಾತಿಯನ್ನು ಒದಗಿಸಬೇಕು ಎಂದು ಆಗ್ರಹಿಸುವ ಮೂಲಕ ವಿವಾದವೊಂದನ್ನು ಸೃಷ್ಟಿಸಿದ್ದರು.
ಭಾರತೀಯ ಸೇನೆಯಲ್ಲಿ ಹಿಂದುಳಿದವರಿಗೆ ಮೀಸಲಾತಿಯನ್ನು ಒದಗಿಸುವ ಬಗ್ಗೆ ತಾನು ಮೋದಿಯವರೊಂದಿಗೆ ವೈಯಕ್ತಿಕವಾಗಿ ಮಾತನಾಡುವುದಾಗಿಯೂ ಅಠಾವಳೆ ತಿಳಿಸಿದರು.
ಎಲ್ಲರೂ ದೇಶಸೇವೆಯನ್ನು ಮಾಡಬೇಕು ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾತನ್ನು ಪ್ರಸ್ತಾಪಿಸಿದ ಅವರು, ಸೇನೆಯನ್ನು ಸೇರುವಂತೆ ಯುವಜನರನ್ನು ಆಗ್ರಹಿಸಿದರು ಎಂದೂ ವರದಿಯು ತಿಳಿಸಿದೆ.