ಎನ್‌ಐಎಯಿಂದ ಕಲ್ಲು ತೂರುವವರ ಸಂಖ್ಯೆ ಇಳಿಕೆ: ರಾಜನಾಥ್ ಸಿಂಗ್
Update: 2017-08-20 21:46 IST
ಹೊಸದಿಲ್ಲಿ, ಆ. 20: ರಾಷ್ಟ್ರೀಯ ತನಿಖಾ ಸಂಸ್ಥೆಯಿಂದಾಗಿ ಜಮ್ಮು ಹಾಗೂ ಕಾಶ್ಮೀರದಲ್ಲಿ ಕಲ್ಲು ಎಸೆಯುವ ಘಟನೆಗಳು ಇಳಿಕೆಯಾಗಿವೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ರವಿವಾರ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ನಕ್ಸಲಿಸಂ, ಭಯೋತ್ಪಾದನೆ, ಉಗ್ರವಾದ ದ ಘಟನೆಗಳು ಇಳಿಕೆಯಾಗಿವೆ ಎಂದು ಅವರು ಹೇಳಿದ್ದಾರೆ.
ಕಲ್ಲು ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಹಾಗೂ ಭಾರತದ ಭದ್ರತೆ ಬಗ್ಗೆ ನಾವು ಪ್ರತಿಜ್ಞೆ ಮಾಡಿದ್ದೇವೆ. ನಾವು ನಕ್ಸಲಿಸಂ, ಭಯೋತ್ಪಾದನೆ, ಉಗ್ರವಾದದ ಸವಾಲನ್ನು ಎದುರಿಸಿದೆವು. ಈಗ ಇದು ಇಳಿಕೆಯಾಗುತ್ತಿದೆ ಎಂದರು.
ರಾಷ್ಟ್ರೀಯ ಭದ್ರತಾ ಸಂಸ್ಥೆಯ ಕಚೇರಿ ಹಾಗೂ ವಾಸ್ತವ್ಯ ಸಂಕೀರ್ಣ ಉದ್ಘಾಟಿಸಿ ರಾಜನಾಥ್ ಸಿಂಗ್ ಮಾತನಾಡಿದರು.