ಸೇನೆಯ ಟಿ-90 ಟ್ಯಾಂಕರ್ ಸಾಮರ್ಥ್ಯ ಹೆಚ್ಚಿಸಲು ನಿರ್ಧಾರ
ಹೊಸದಿಲ್ಲಿ, ಆ. 20: ಆಕ್ರಮಣ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಸೇನೆ ಟಿ-90 ಪ್ರಧಾನ ಯುದ್ಧ ಟ್ಯಾಂಕ್‌ಗಳಿಗೆ ಮೂರನೆ ತಲೆಮಾರಿನ ಕ್ಷಿಪಣಿ ವ್ಯವಸ್ಥೆ ಜೋಡಿಸಲು ನಿರ್ಧರಿಸಿದೆ.
ಪ್ರಸ್ತುತ ಟಿ-90 ಟ್ಯಾಂಕ್ ಲೆಸರ್ ನಿರ್ದೇಶಿತ ಐಎನ್‌ವಿಎಆರ್ ಕ್ಷಿಪಣಿ ವ್ಯವಸ್ಥೆ ಹೊಂದಿದೆ. ಇದರ ಬದಲಿಗೆ ಮೂರನೆ ತಲೆಮಾರಿನ ಕ್ಷಿಪಣಿ ಅಳವಡಿಸಲು ಸೇನೆ ನಿರ್ಧರಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಮಧ್ಯಪ್ರವೇಶಿಸುವ ಆಳ ಹಾಗೂ ದೂರದ ನಿಟ್ಟಿನಲ್ಲಿ ಈಗಿರುವ ಐಎನ್‌ವಿಎಆರ್ ಕ್ಷಿಪಣಿ ವಿನ್ಯಾಸ ಗರಿಷ್ಠ ಮಟ್ಟದಲ್ಲಿದೆ. ಆದರೆ ಆಕ್ರಮಣ ಸಾಮರ್ಥ್ಯ ಹೆಚ್ಚಿಸಲು ಮುಂದಿನ ತಲೆಮಾರಿನ ಕ್ಷಿಪಣಿ ಅಳವಡಿಸಿ ಮೇಲ್ದರ್ಜೆಗೆ ಏರಿಸುವುದು ಅನಿವಾರ್ಯ ವಾಗಿದೆ.
ಆಕ್ರಮಣ ರೂಪಿಸುವುದರಲ್ಲಿ ಭಾರತ ಸೇನೆಯ ರಶ್ಯ ಮೂಲದ ಟಿ-90 ಟ್ಯಾಂಕ್ ಪ್ರಮುಖವಾಗಿದೆ. ಈ ಮೂರನೆ ತಲೆಮಾರಿನ ಕ್ಷಿಪಣಿ 800ರಿಂದ 850 ಎಂಎಂ ಆಳ ಹಾಗೂ ದೂರವನ್ನು ಕ್ರಮಿಸುತ್ತದೆ. ರಾತ್ರಿ ಹಾಗೂ ಹಗಲಿನಲ್ಲಿ 8 ಕಿ.ಮೀ. ದೂರದಲ್ಲಿರುವ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಟಿ-90 ಟ್ಯಾಂಕ್‌ನ 125 ಎಂಎಂ ಗನ್ ಬ್ಯಾರಲ್‌ನಿಂದ ಈ ಕ್ಷಿಪಣಿ ಹಾರಿ ಗುರಿ ತಲುಪಲಿದೆ. ಸ್ಥಿರ ಹಾಗೂ ಚರ ಗುರಿಯನ್ನು ಕೂಡ ಹೊಡೆದುರುಳಿಸುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ ಎಂದು ಮೂಲಗಳು ತಿಳಿಸಿವೆ.