×
Ad

ಭಿಕ್ಷುಕಿಯಿಂದ ಹಣ ಕಿತ್ತುಕೊಂಡ ಪೊಲೀಸ್ ಬಂಧನ

Update: 2017-08-24 18:25 IST

ಜಮ್ಮು, ಆ.24: ಜಮ್ಮು-ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ರಸ್ತೆ ಬದಿ ಭಿಕ್ಷಾಟನೆ ಮಾಡುತ್ತಿದ್ದ ಭಿಕ್ಷುಕಿಯಿಂದ ಹಣ ಕಿತ್ತುಕೊಂಡ ಆರೋಪದಲ್ಲಿ ಪೊಲೀಸ್ ಸಿಬ್ಬಂದಿಯೋರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.

ಭಿಕ್ಷುಕಿಯಿಂದ ಹೆಡ್‌ಕಾನ್‌ಸ್ಟೇಬಲ್ ಮುನಾವರ್ ಹುಸೇನ್ ಹಣ ಕಿತ್ತುಕೊಳ್ಳುವ ವೀಡಿಯೊ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಹೆಡ್‌ಕಾನ್‌ಸ್ಟೇಬಲ್ ಬಂಧನವಾಗಿದೆ.

ಪ್ರಕರಣ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಬಂಧಿತ ಹೆಡ್‌ಕಾನ್‌ಸ್ಟೇಬಲ್‌ರನ್ನು ಅಮಾನತುಗೊಳಿಸಲಾಗಿದೆ ಎಂದು ರಾಂಬನ್ ಜಿಲ್ಲಾ ಹಿರಿಯ ಪೊಲೀಸ್ ಅಧೀಕ್ಷಕ ಮೋಹನ್‌ಲಾಲ್ ತಿಳಿಸಿದ್ದಾರೆ.

ಅತಿಯಾದ ಮದ್ಯಸೇವನೆ ಮಾಡುತ್ತಿದ್ದ ಕಾರಣಕ್ಕೆ ಈತನನ್ನು ಕಿಸ್ತ್‌ವಾರ್‌ನಿಂದ ವರ್ಗಾಯಿಸಲಾಗಿತ್ತು. ಅಲ್ಲದೆ ಈತನ ವಿರುದ್ಧ ಇತರ ಮೂರು ಪ್ರಕರಣಗಳೂ ದಾಖಲಾಗಿದ್ದವು. ದುಷ್ಚಟಗಳ ದಾಸನಾಗಿದ್ದ ಕಾರಣ ಈತನ ಎಟಿಎಂ ಕಾರ್ಡನ್ನು ಪತ್ನಿಗೆ ನೀಡಲಾಗಿತ್ತು ಮತ್ತು ಹಣಕಾಸಿನ ವ್ಯವಹಾರ ಈತನ ಕೈಗೆ ನೀಡದಂತೆ ತಿಳಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಹುಸೇನ್ ಭಿಕ್ಷುಕಿಯಿಂದ ಹಣ ಕಿತ್ತುಕೊಳ್ಳುತ್ತಿರುವುದನ್ನು ಗಮನಿಸಿದ ಪೊಲೀಸರು ಆತನನ್ನು ಬಂಧಿಸಿದರು ಎಂದವರು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News