×
Ad

ಏರ್ ಇಂಡಿಯಾದ ಸಿಎಂಡಿಯಾಗಿ ರಾಜೀವ ಬನ್ಸಲ್ ಅಧಿಕಾರ ಸ್ವೀಕಾರ

Update: 2017-08-24 19:04 IST

ಹೊಸದಿಲ್ಲಿ,ಆ.24: ಹಿರಿಯ ಐಎಎಸ್ ಅಧಿಕಾರಿ ರಾಜೀವ ಬನ್ಸಲ್ ಅವರು ಏರ್‌ಇಂಡಿಯಾದ ಮಧ್ಯಂತರ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿ ತನ್ನ ಪೂರ್ವಾಧಿಕಾರಿ ಹಾಗೂ ರೈಲ್ವೆ ಮಂಡಳಿಯ ನೂತನ ಅಧ್ಯಕ್ಷ ಅಶ್ವನಿ ಲೋಹಾನಿ ಅವರಿಂದ ಗುರುವಾರ ಅಧಿಕಾರ ಸ್ವೀಕರಿಸಿದರು.

ಅಧಿಕಾರ ಸ್ವೀಕರಿಸಿದ ಬೆನ್ನಿಗೇ ಬನ್ಸಲ್ ಅವರು ಏರ್ ಇಂಡಿಯಾದ ಹಿರಿಯ ಅಧಿಕಾರಿಗಳ ಸಭೆಯನ್ನು ನಡೆಸಿದರು. ಸಾಲದ ಕೂಪದಲ್ಲಿ ಸಿಲುಕಿರುವ ಏರ್ ಇಂಡಿಯಾದ ಖಾಸಗೀಕರಣಕ್ಕೆ ಸರಕಾರವು ವಿಧಿವಿಧಾನಗಳನ್ನು ರೂಪಿಸುತ್ತಿರುವ ಸಂದರ್ಭದಲ್ಲಿಯೇ ತೈಲ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಹಣಕಾಸು ಸಲಹೆಗಾರರಾಗಿದ್ದ ಬನ್ಸಲ್ರನ್ನು ಅದರ ಮುಖ್ಯಸ್ಥರಾಗಿ ಬುಧವಾರ ನೇಮಕಗೊಳಿಸಲಾಗಿತ್ತು.

ನಾಗಾಲ್ಯಾಂಡ್ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ಬನ್ಸಲ್ ಈ ಹಿಂದೆ ಸುಮಾರು ಎರಡು ವರ್ಷಗಳ ಕಾಲ ನಾಗರಿಕ ವಾಯುಯಾನ ಸಚಿವಾಲಯದಲ್ಲಿ ಸೇವೆ ಸಲ್ಲಿಸಿದ್ದರು.

50,000 ಕೋ.ರೂ.ಗೂ ಅಧಿಕ ಸಾಲದ ಹೊರೆಯನ್ನು ಹೊತ್ತಿರುವ ಏರ್ ಇಂಡಿಯಾ 2015-16ರಲ್ಲಿ ದಶಕದಲ್ಲಿ ಮೊದಲ ಬಾರಿಗೆ ಲಾಭದ ಮುಖ ನೋಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News