ಇನ್ಫೋಸಿಸ್ ನ ನೂತನ ಅಧ್ಯಕ್ಷರಾಗಿ ನಂದನ್ ನಿಲೇಕಣಿ ನೇಮಕ
Update: 2017-08-24 21:10 IST
ಹೊಸದಿಲ್ಲಿ, ಆ.24: ವಿಶಾಲ್ ಸಿಕ್ಕಾ ಅವರ ರಾಜೀನಾಮೆಯ ನಂತರ ಇನ್ಫೋಸಿಸ್ ನ ನೂತನ ಚೇರ್ ಮೆನ್ ಆಗಿ ನಂದನ್ ನಿಲೇಕಣಿಯವರನ್ನು ನೇಮಕ ಮಾಡಲಾಗಿದೆ.
ಇನ್ಫೋಸಿಸ್ ನ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮಂಡಳಿಯ ಚೇರ್ ಮೆನ್ ಆರ್. ಸೇಶಸಾಯಿ ಹಾಗೂ ಕೋ-ಚೇರ್ ಮೆನ್ ರವಿ ವೆಂಕಟೇಶನ್ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ ನಂತರ ಈ ಬೆಳವಣಿಗೆ ನಡೆದಿದೆ.
“ತಕ್ಷಣದಿಂದ ಜಾರಿಗೆ ಬರುವಂತೆ ನಿಲೇಕಣಿಯವರನ್ನು ನಿರ್ದೇಶಕ ಮಂಡಳಿಯ ಕಾರ್ಯನಿರ್ವಾಹಕೇತರ ಅಧ್ಯಕ್ಷ ಹಾಗೂ ಚೇರ್ ಮೆನ್ ಆಗಿ ನೇಮಿಸಲಾಗಿದೆ” ಎಂದು ಇನ್ಫೋಸಿಸ್ ಹೇಳಿದೆ.