×
Ad

ರಾಜರಥದಲ್ಲಿ ಆರ್ಯ

Update: 2017-08-25 16:42 IST

ಕಾಲಿವುಡ್‌ನ ಜನಪ್ರಿಯ ನಟನೊಬ್ಬ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡು ತ್ತಿದ್ದಾರೆ. ‘ನಾನ್ ಕಡವುಳ್’, ‘ರಾಜರಾಣಿ’ ಚಿತ್ರಗಳ ಮೂಲಕ ತಮಿಳು ಚಿತ್ರರಸಿಕರ ಮನಗೆದ್ದಿರುವ ಆರ್ಯ, ‘ರಂಗಿತರಂಗ’ ತಂಡ ನಿರ್ಮಿಸುತ್ತಿರುವ ‘ರಾಜರಥ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರಾಜರಥಕ್ಕೆ ಆರ್ಯ ಆಗಮನವು ಚಿತ್ರದ ಬಗ್ಗೆ ಇರುವ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಮೊತ್ತ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸಿರುವುದು ಆರ್ಯಗೂ ತುಂಬಾ ಖುಷಿ ಉಂಟು ಮಾಡಿದೆಯಂತೆ. ನಿರ್ದೇಶಕ ಅನೂಪ್ ಭಂಡಾರಿ ಅವರಿಂದ ಕಥೆಯನ್ನು ಕೇಳಿದ ಕೇವಲ 5 ನಿಮಿಷದಲ್ಲಿ ಆರ್ಯ, ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟರಂತೆ. ಈ ಮೊದಲು ರಂಗಿತರಂಗ ಸಿನೆಮಾ ನೋಡಿರುವ ಆರ್ಯ, ಚಿತ್ರಕ್ಕಾಗಿ ನಿರ್ದೇಶಕ ಅನೂಪ್‌ಭಂಡಾರಿ ಮತ್ತವರ ತಂಡದ ಶ್ರಮ ವನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದರು. ಈ ಟೀಮ್‌ನೊಂದಿಗೆ ಯಾವತ್ತಾದರೂ ಕೆಲಸ ಮಾಡುವ ಹಂಬಲವನ್ನು ಕೂಡಾ ಅವರು ಆಗ ಹಂಚಿಕೊಂಡಿದ್ದರಂತೆ. ಅದರೆ ತನ್ನ ಕನಸು ಇಷ್ಟಬೇಗ ಫಲಿಸಬಹುದೆಂಬುದು ಸ್ವತಃ ಆರ್ಯ ಕೂಡಾ ಊಹಿಸಿರಲಿಕ್ಕಿಲ್ಲ.

ಆರ್ಯ ಈಗಾಗಲೇ ರಾಜರಥಕ್ಕಾಗಿ 12 ದಿನಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿ ದ್ದಾರೆ. ತಮ್ಮ ಚೊಚ್ಚಲ ಚಿತ್ರ ರಂಗಿತರಂಗದ ಭರ್ಜರಿ ಗೆಲುವಿನ ಹುಮ್ಮಸ್ಸಿನೊಂದಿಗೆ ಭಂಡಾರಿ ಸಹೋದರರು ನಿರ್ಮಿಸುತ್ತಿರುವ ಈ ಚಿತ್ರದ ಶೂಟಿಂಗ್ ಮೈಸೂರಿನ ಆಸುಪಾಸಿನಲ್ಲಿ ಭರದಿಂದ ಸಾಗಿದೆ. ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಹಾಗೂ ಆವಂತಿಕಾ ಶೆಟ್ಟಿ ಅವರು ನಾಯಕ, ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News